Advertisement

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

02:29 PM Nov 18, 2024 | Team Udayavani |

ಮಲ್ಪೆ: ಉಡುಪಿ ನಗರಸಭೆ ಮತ್ತು ಮಲ್ಪೆ ಕೊಳ ಪರಿಸರದ ಐದು ಭಜನಾ ಮಂದಿರಗಳ ಸಹಯೋಗದಲ್ಲಿ ಮಲ್ಪೆ ಬೀಚ್‌ನಲ್ಲಿ ಸ್ವಚ್ಛತ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.

Advertisement

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೀನುಗಾರರ ಅನ್ನದ ಬಟ್ಟಲು ಸಮುದ್ರ, ಸಮುದ್ರ ಮತ್ತು ಸಮುದ್ರ ತೀರವನ್ನು ಸ್ವತ್ಛವಾಗಿಡುವುದೇ ನಿಜವಾದ ಸಮುದ್ರ ಪೂಜೆ. ಪರಿಸರವನ್ನು ಸ್ವತ್ಛವಾಗಿ ಇಡುವುದರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ,ಕಾಯಿಲೆಗಳ ಉತ್ಪತ್ತಿ, ಪರಿಸರ ಮಾಲಿನ್ಯ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

ಪಾಂಡುರಂಗ ಮಲ್ಪೆ ಮಾತನಾಡಿ, ನಮ್ಮ ಬೀಚ್‌ನ್ನು ಸ್ವತ್ಛ, ಸುಂದರವಾಗಿ ಇಡುವುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ಸ್ಥಳೀಯ ಅಂಗಡಿ, ಮನೆಯವರು, ಹೋಮ್‌ ಸ್ಟೇಯವರು ಕಸಗಳನ್ನು ನಗರಸಭೆಯ ಕಸ ಸಾಗಿಸುವ ವಾಹನಕ್ಕೆ ನೀಡಬೇಕು, ಹೆಚ್ಚು ಕಸವನ್ನು ಬೇರೆ ಕಡೆಯವರು ಬೆಳಗ್ಗಿನ ಜಾವಾ ಬೈಕ್‌ನಲ್ಲಿ ಬಂದು ಬಿಸಾಡುದರಿಂದ ಕಸದ ರಾಶಿಯಾಗುತ್ತದೆ. ಇದನ್ನು ನಗರ ಸಭೆ ತಡೆಗಟ್ಟಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಲಕ್ಷ್ಮೀ ಮಂಜುನಾಥ್‌, ಎಡ್ಲಿನ್‌ ಕರ್ಕಡ, ಆರೋಗ್ಯಾಧಿಕಾರಿ ಮನೋಹರ್‌ ಜತ್ತನ್‌, ಮೇಲ್ವಿಚಾರಕರಾದ ಯೋಗೀಶ್‌, ಪ್ರಶಾಂತ್‌, ಮಲ್ಪೆ ಹನುಮಾನ್‌ ವಿಠೊಭ ಭಜನಾ ಮಂದಿರದ ಅಧ್ಯಕ್ಷ ಸತೀಶ್‌ ಬಂಗೇರ, ಬಾಲಕರ ಶ್ರೀರಾಮ ಭಜನಾ ಮಂದಿರದ ಗೌರವ ಸಲಹೆಗಾರ ಸದಾನಂದ ಸಾಲ್ಯಾನ್‌, ಶಿವ ಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ಅರುಣ್‌ ಸಾಲ್ಯಾನ್‌, ಜ್ಞಾನಜ್ಯೋತಿ ಭಜನಾ ಮಂದಿರದ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್‌, ಭಕ್ತಿ ಉದಯ ಪಂಡರೀನಾಥ ಭಜನಾ ಮಂದಿರದ ಅಧ್ಯಕ್ಷ ವಿಲಾಸ್‌, ಮಂಜು ಕೊಳ, ವಿಕ್ರಮ್‌ ಸಾಲ್ಯಾನ್‌, ಸುದೇಶ ಶೆಟ್ಟಿ ಮತ್ತು ಭಜನಾ ಮಂದಿರ ಮತ್ತು ಮಾತೃ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

3ದಿನದ ಸ್ವತ್ಛತಾ ಕಾರ್ಯಕ್ರಮದಲ್ಲಿ ಒಟ್ಟು 26 ಲಾರಿ ಕಸ ಸಂಗ್ರಹಿಸಲಾಯಿತು. ಇಂಟರ್‌ಲಾಕ್‌ ರಸ್ತೆಯ ಪೂರ್ವ ಭಾಗಕ್ಕೆ ಇಂಟರ್‌ಲಾಕ್‌ ಅಳವಡಿಸಿ ವಾಹನ ಪಾರ್ಕ್‌ ಮಾಡಲು ಯೋಜನೆ ರೂಪಿಸಬೇಕು ಎಂದು ಶಾಸಕರಿಗೆ ಮನವಿ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next