Advertisement
ಶಿರ್ವ ಮಾಣಿಬೆಟ್ಟು ಹಾಗೂ ಕಟ್ಟಿಂಗೇರಿ ಪರಿಸರದ ಜನ ನಿತ್ಯ ಕೆಲಸ ಕಾರ್ಯ ಹಾಗೂ ಶಾಲೆ ಕಾಲೇಜುಗಳಿಗೆ ಹೋಗಲು ಈ ರಸ್ತೆಯನ್ನೇ ಬಳಸುತ್ತಿದ್ದು ರಸ್ತೆ ಕಡಿತಗೊಂಡಿದ್ದರಿಂದಾಗಿ ಜನ ಅತ್ತಿತ್ತ ಸಾಗಲು ಪರದಾಟ ನಡೆಸುತ್ತಿರುವ ಬಗ್ಗೆ ಪತ್ರಿಕೆ ಸಮಗ್ರ ವರದಿ ಪ್ರಕಟಿ ಸಿತ್ತು. ದಿನನಿತ್ಯಈ ಮಾರ್ಗದಲ್ಲಿ ಐದಾರು ಶಾಲಾ ವಾಹನಗಳು ಓಡಾಟ ನಡೆಸುತ್ತಿದ್ದು ರಸ್ತೆ ಕೊಚ್ಚಿ ಹೋಗಿದ್ದರಿಂದಾಗಿ ಜನರು, ಶಾಲಾ ವಿದ್ಯಾರ್ಥಿಗಳು ದೂರದ ಮಟ್ಟಾರು-ನಾಲ್ಕುಬೀದಿ ರಸ್ತೆಯನ್ನು ಬಳಸುತ್ತಿತ್ತು.ಉದಯವಾಣಿ ವರದಿಗೆ ಸ್ಪಂದನೆ
ವರದಿಗೆ ಸ್ಪಂದಿಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 1 ಲಕ್ಷ ರೂ. ಬಿಡುಗಡೆ ಮಾಡಿ ತುರ್ತು ಕಾಮಗಾರಿ ನಡೆಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಗುತ್ತಿಗೆದಾರ ಚಂದ್ರಶೇಖರ ಶೆಟ್ಟಿ ಕಾಮಗಾರಿ ನಡೆಸಿ ರಸ್ತೆ ಸರಿಪಡಿಸಿದ್ದಾರೆ. ಜಿ.ಪಂ.ಸದಸ್ಯ ವಿಲ್ಸನ್ ರೋಡ್ರಿಗಸ್ ಈ ರಸ್ತೆಗೆ ಸಂಕ ರಚಿಸುವ ಬಗ್ಗೆ ಅನುದಾನ ಜೋಡಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳುವಂತೆ ಗ್ರಾಮಸ್ಥರ ಪರವಾಗಿ ಸ್ಥಳೀಯ ಶಾಸಕ ಲಾಲಾಜಿ ಮೆಂಡನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.