Advertisement
ಹಿರಿಯ ಪತ್ರಕರ್ತ ವಿರೂಪಾಕ್ಷ ಹೆಗಡೆ ಕಂಚೀಕೈ ಅವರಿಗೆ ಮಾಧ್ಯಮ ಶ್ರೀ ಪ್ರಶಸ್ತಿಯನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿ ಮಾತನಾಡಿ, ಹಿರೇತನ ಗುರುತಿಸಿ ಪ್ರಶಸ್ತಿ ಕೊಡುವದು ಶ್ಲಾಘನೀಯ. ಕನ್ನಡ ಪತ್ರಿಕೋದ್ಯಮ ಅತ್ಯಂತ ಹಳೆಯ ಇತಿಹಾಸ ಇದೆ. ರಾಜ್ಯದಲ್ಲಿ ಪ್ರಭಾವಿಯಾಗಿ ಮಾಧ್ಯಮ ಕಾರ್ಯ ಮಾಡುತ್ತಿದೆ. ಅಜ್ಜಿಬಳ ಹೆಗಡೆ ಅವರು 48 ವರ್ಷಗಳ ಹಿಂದೆ ಪತ್ರಿಕಾ ಸಂಘ ಕಾರ್ಯ ಆರಂಭಿಸಿದ್ದರು. ಸಮಾಜದ ಆಗು ಹೋಗುಗಳಿಗೆ ತಿಳಿದುಕೊಳ್ಳಲು ಸಕ್ರೀಯವಾಗಿ ಪತ್ರಕರ್ತರು ತೊಡಗಿಕೊಳ್ಳಬೇಕು. ಪತ್ರಿಕೋದ್ಯಮದಲ್ಲಿ ತೊಡಗಿಕೊಳ್ಳಲು ಜಿಲ್ಲೆ ಪತ್ರಕರ್ತರನ್ನು ಸಿದ್ದಗೊಳಸಲಿಲು ತರಬೇತಿ ಕೇಂದ್ರ. ಬಹಳ ದೊಡ್ಡ ಜವಬ್ದಾರಿ ನಿರ್ವಹಿಸುತ್ತಿದ್ದೇವೆ ಎಂಬುದನ್ನು ಪತ್ರಕರ್ತರು ಅರಿತು ನಡೆಯಡಬೇಕು. ಪತ್ರಿಕೋದ್ಯಮದಲ್ಲಿ ನಂಬಿಕೆ, ವಿಶ್ವಾಸ ಬೆಳಸಿಕೊಂಡು ನಡೆಯಬೇಕು ಎಂದರು.
Related Articles
Advertisement