Advertisement

ಲಿಂಬುವಿನಿಂದ ಹೊಳಪು

02:11 PM Nov 24, 2018 | |

ಲಿಂಬೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಸಾಮಾನ್ಯವಾಗಿ ಈ ಹಣ್ಣನ್ನು ಪ್ರತಿಯೊಬ್ಬರ ಮನೆಯಲ್ಲೂ ಅಡುಗೆಗೆ ಅಥವಾ ತಂಪು ಪಾನೀಯಗಳನ್ನು ಮಾಡಲು ಉಪಯೋಗಿಸುತ್ತಾರೆ. ಆದರೆ ಇದರಿಂದ ನಿಮ್ಮ ಮನೆಯನ್ನೂ ಹಾಗೂ ಅಲ್ಲಿರುವ ವಸ್ತುಗಳನ್ನು ಕೂಡ ಹೊಳಪಿನಿಂದ ಇಟ್ಟುಕೊಳ್ಳಬಹುದು ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು.

Advertisement

ಅಡುಗೆ ಮಾಡುವ ಕಟ್ಟೆ ಸ್ವಚ್ಛತೆಗೆ
ನೀವು ಅಡುಗೆ ಮಾಡಿ ಮುಗಿಸಿದ್ದೀರಿ ಆದರೆ ಆ ಟೈಲ್ಸ್‌ ಗಳ ಮೇಲೆ ಆದ ಕಲೆಗಳು ಹೋಗುತ್ತಿಲ್ಲ ಎಂದಾದರೆ ಬಳಸಿದ ನಿಂಬೆ ಹಣ್ಣಿನ ಸಿಪ್ಪೆಗೆ ಸ್ವಲ್ಪ ಉಪ್ಪು ಬೇರೆಸಿ ಅದನ್ನು ಟೈಲ್ಸ್‌ ಅಥವಾ ಕಟ್ಟೆಗಳ ಮೇಲೆ ಒರೆಸುವುದರಿಂದ ಜಿಡ್ಡಿನ ಕಲೆಗಳು ಹೋಗುತ್ತದೆ. ಕಟ್ಟೆಗಳ ಮೇಲೆ ವರ್ಷಗಟ್ಟಲೆಯಿಂದ ಇದ್ದ ಕಲೆಗಳು ಕೂಡ ಮಾಯವಾಗುತ್ತದೆ.

ಬೇಸಿನ್‌ ಸ್ವಚ್ಛಗೊಳಿಸಲು
ಸ್ಟೀಲ್‌ ಬೇಸಿನ್‌ ಗಳು ಬೇಗ ಹೊಳಪು ಕಳೆದುಕೊಳ್ಳುತ್ತವೆ. ಅದಲ್ಲದೆ ಜಿಡ್ಡು ಇನ್ನಿತರ ಕಲೆಗಳಿಂದ ಮುಕ್ತಿ ಹೊಂದಲು ಲಿಂಬೆ ಹಣ್ಣು ಅತ್ಯಂತ ಸಹಾಯಕಾರಿ ಇದರ ರಸ ಹಾಗೂ ಸ್ವಲ್ಪ ಉಪ್ಪು ಮತ್ತು ಅಡುಗೆ ಸೋಡಾ ಬಳಸಿ ಬೇಸಿನ್‌ ಉಜ್ಜಿದರೆ ಹೊಳಪು ಪಡೆದುಕೊಂಡು ಸುಂದರವಾಗಿ ಕಾಣುತ್ತದೆ ಅದಲ್ಲದೆ ಜಿಡ್ಡಿನ ಕಲೆಗಳೂ ಮಾಯವಾಗುತ್ತದೆ.

ಚಾ ಸೋಸುವ ಸೌಟು
ಚಾ ಸೋಸುವ ಸೌಟು ಎಷ್ಟು ತೊಳೆದರೂ ಕೂಡ ಹೋಗು ವುದೇ ಇಲ್ಲ ಆಗ ಲಿಂಬೆ ಹಣ್ಣು ಹಾಕಿ ಉಜ್ಜಿದರೆ ಅದರ ಕಲೆಗಳು ಮಾಯವಾಗಿ ಚಾ ಸೋಸುವ ಸೌಟು ಕ್ಲೀನ್‌ ಆಗುತ್ತದೆ. 

ತಾಮ್ರ ಹಿತ್ತಾಳೆ ಪಾತ್ರೆ ಸ್ವಚ್ಛಗೊಳಿಸಲು
ಮನೆಯಲ್ಲಿ ದೇವರ ಪಾತ್ರೆ ಅಥವಾ ಇನ್ನಿತರ ಕೆಲಸಗಳಿಗೆ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಅವುಗಳು ಬರುಬರುತ್ತಾ ಹೊಳಪು ಕಳೆದುಕೊಳ್ಳುತ್ತದೆ. ಆಗ ಲಿಂಬೆ ಹಣ್ಣಿಗೆ ಸ್ವಲ್ಪ ಉಪ್ಪು ಹಾಗೂ ಹುಣಸೆ ಹಣ್ಣು ಸೇರಿಸಿ ಪಾತ್ರೆಯನ್ನು ಉಜ್ಜಬೇಕು. ಆಗ ಪಾತ್ರೆಗಳು ಹೊಸದರಂತೆ ಕಂಗೊಳಿಸುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next