Advertisement

ಮತ್ತೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ ಶಿಖರ್ ಧವನ್? ಏನಿದು ವರದಿ

11:25 AM Jun 30, 2023 | Team Udayavani |

ಮುಂಬೈ: ಮೂರು ಮಾದರಿ ಕ್ರಿಕೆಟ್ ನಲ್ಲಿ ಆಯ್ಕೆಗಾರರಿಂದ ಕಡೆಗಣಿಸಲ್ಪಟ್ಟಿರುವ ಎಡಗೈ ಆಟಗಾರ ಶಿಖರ್ ಧವನ್ ಅವರು ಮತ್ತೆ ರಾಷ್ಟ್ರೀಯ ತಂಡದ ನಾಯಕನಾಗುವ ಸಾಧ್ಯತೆಯಿದೆ.

Advertisement

ಹೌದು, ಏಷ್ಯನ್ ಗೇಮ್ಸ್ ಗೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಒಪ್ಪಿದ್ದು, ಇದಕ್ಕೆ ಪ್ರಮುಖ ಆಟಗಾರರಿಲ್ಲದ ಎ ತಂಡವನ್ನು ಆಡಿಸುವ ಸಾಧ್ಯತೆಯಿದೆ. ಹೀಗಾಗಿ ಈ ತಂಡಕ್ಕೆ ರೋಹಿತ್ ಶರ್ಮಾ ಬದಲು ಶಿಖರ್ ಧವನ್ ನಾಯಕತ್ವ ವಹಿಸಬಹುದು ಎಂದು ವರದಿಯಾಗಿದೆ.

ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಶುಭ್ಮನ್ ಗಿಲ್ ಅವರು ರೋಹಿತ್ ಜೊತೆಗೆ ಆರಂಭಿಕ ಸ್ಥಾನದಲ್ಲಿ ತಳವೂರಿದ್ದಾರೆ. ಹೀಗಾಗಿ ಶಿಖರ್ ಧವನ್ ಗೆ ತಂಡದಲ್ಲಿ ಜಾಗ ಇಲ್ಲದಾಗಿದೆ. ವೆಸ್ಟ್ ಇಂಡೀಸ್ ಸರಣಿಗೆ ಈಗಾಗಲೇ ಏಕದಿನ ತಂಡವನ್ನು ಪ್ರಕಟ ಮಾಡಿದ್ದು, ಇದರಲ್ಲಿ ಧವನ್ ಗೆ ಜಾಗ ಸಿಕ್ಕಿಲ್ಲ. ಅಲ್ಲದೆ ವಿಂಡೀಸ್ ಟಿ20 ಸರಣಿಗೂ ಧವನ್ ಆಯ್ಕೆಯಾಗುವುದು ಕಷ್ಟ ಎನ್ನಲಾಗಿದೆ.

ಈ ಬಾರಿಯ ಏಷ್ಯನ್ ಗೇಮ್ಸ್ ಕೂಟವು ಸಪ್ಟೆಂಬರ್ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹ್ಯಾಂಗ್ ಚೌ ನಗರದಲ್ಲಿ ನಡೆಯಲಿದೆ. ಅಕ್ಟೋಬರ್ 5ರಿಂದ ಭಾರತದಲ್ಲೇ ಏಕದಿನ ವಿಶ್ವಕಪ್ ಕೂಟ ನಡೆಯುವ ಕಾರಣ ಪ್ರಮುಖ ತಂಡವನ್ನು ಕಳುಹಿಸುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು.

ಇದನ್ನೂ ಓದಿ:Viral: 500 ರೂ. ನೋಟುಗಳ ರಾಶಿ, ರಾಶಿ ಹಣದ ಜತೆ ಪೊಲೀಸ್‌ ಅಧಿಕಾರಿಯ ಹೆಂಡತಿ, ಮಕ್ಕಳ ಸೆಲ್ಫಿ!

Advertisement

ಜುಲೈ 7 ರಂದು ನಡೆಯುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಏಷ್ಯನ್ ಗೇಮ್ಸ್ ತಂಡದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಅದೇ ಸಭೆಯಲ್ಲಿ, ಮಂಡಳಿಯು ವಿಶ್ವಕಪ್‌ಗಾಗಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುವ ಮಾರ್ಗಸೂಚಿಯನ್ನು ಸಹ ಮಾಡಲಿದೆ. ಪಂದ್ಯಾವಳಿಯನ್ನು ಆಯೋಜಿಸಲು ಬಿಸಿಸಿಐ ಮತ್ತು ಐಸಿಸಿ ಹತ್ತು ಸ್ಥಳಗಳನ್ನು ಅಂತಿಮಗೊಳಿಸಿದೆ ಮತ್ತು ಅವುಗಳಲ್ಲಿ ಹೆಚ್ಚಿನವುಗಳಿಗೆ ದೊಡ್ಡ ಕೂಟಕ್ಕೆ ಮುಂಚಿತವಾಗಿ ಅಭಿವೃದ್ಧಿ ಕಾರ್ಯಗಳ ಅಗತ್ಯವಿದೆ.

ಏಷ್ಯನ್ ಗೇಮ್ಸ್ ನಲ್ಲಿ 9 ವರ್ಷಗಳ ಬಳಿಕ ಮತ್ತೆ ಕ್ರಿಕೆಟ್ ಗೆ ಅವಕಾಶ ನೀಡಲಾಗಿದೆ. ಕೂಟಕ್ಕೆ ತಂಡವನ್ನು ಕಳುಹಿಸಲು ಬಿಸಿಸಿಐ ಆಸಕ್ತಿ ತೋರಿಸಿರಲಿಲ್ಲ. ಆದರೆ ಇದಕ್ಕೆ ಈಗ ತಂಡ ಕಳುಹಿಸಲು ನಿರ್ಧರಿಸಿದ್ದು, ಮಹಿಳಾ ಮತ್ತು ಪುರುಷರ ತಂಡವನ್ನು ಕಳುಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next