ಹೊಸದಿಲ್ಲಿ : ಅಕ್ರಮ ಹಣ ವಿನಿಮಯ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಶೇಖರ ರೆಡ್ಡಿ ಅವರನ್ನು ಜಾರಿ ನಿರ್ದೇಶನಲಾಯದ ಚೆನ್ನೈ ವಿಭಾಗದ ಅಧಿಕಾರಿಗಳು ಸೋಮವಾರ ತಡರಾತ್ರಿ ಪುನಃ ಬಂಧಿಸಿದ್ದು ಮಾರ್ಚ್ 28ರ ವರೆಗೆ ಆತನನ್ನು ನ್ಯಾಯಾಂಗದ ಕಸ್ಟಡಿಗೆ ನೀಡಲಾಗಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ರೆಡ್ಡಿಯನ್ನು 130 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣ ಸಂಗ್ರಹಿಸಿದ ಆರೋಪದ ಮೇಲೆ ಸಿಬಿಐ ಬಂಧಿಸಿ ತನ್ನ ಕಸ್ಟಡಿಗೆ ತೆಗೆದುಕೊಂಡಿತ್ತು.
ರೆಡ್ಡಿ ಬಂಧನದ ತರುವಾಯ ಚನ್ನೈನಲ್ಲಿನ ಮಾಜಿ ಮುಖ್ಯ ಕಾರ್ಯದರ್ಶಿ ಟಿ ಎನ್ ರಾಮ ಮೋಹನ್ ರಾವ್ ಮತ್ತು ಅವರ ಪುತ್ರ ವಿವೇಕ ಪಪ್ಪಿ ಸೆಟ್ಟಿ ಅವರ ಮನೆಯ ಮೇಲೆ ದಾಳಿ ನಡೆದಿತ್ತು.
ರಾಮಮೋಹನ್ ರಾವ್ ಮತ್ತು ಅವರ ಪುತ್ರ ದಾಖಲೆ ಇಲ್ಲದ ಅಪಾರ ಹಣವನ್ನು ಸಂಗ್ರಹಿಸಿಟ್ಟು ಕೊಂಡಿರುವ ಆರೋಪ ಹೊತ್ತಿದ್ದು ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತನಿಖಾ ದಳದ ಆದಾಯ ತೆರಿಗೆ ಇಲಾಖಾಧಿಯೋರ್ವರು ತಿಳಿಸಿದ್ದಾರೆ.
ಶೇಖರ ರೆಡ್ಡಿ ಇತ್ತೀಚೆಗಷ್ಟೇ ಸಿಬಿಐ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದರು.