Advertisement
ತನ್ನ ಮೇಲೆ ದೌರ್ಜನ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರ ತನಿಖೆಗೆ ಸಹಕರಿಸಿದರೆ ಜೀವಭಯವಿರಬಹುದು ಎಂಬ ಕಾರಣಕ್ಕೆ ಆಕೆ ತನಿಖೆಗೂ ಅಸಹಕಾರ ವ್ಯಕ್ತಪಡಿಸುತ್ತಿದ್ದಾಳೆ. ಇನ್ನೂ ಎರಡು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಿದೆ. ಹೀಗಿರುವಾಗ ಸ್ಥಳೀಯರ ವಿರೋಧ ಕಟ್ಟಿಕೊಂಡು ಜೀವಕ್ಕೆ ತೊಂದರೆಯಾದರೆ ಎಂಬ ಆತಂಕವನ್ನು ಯುವತಿಯ ಪೋಷಕರೂ ಪೊಲೀಸರ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Related Articles
Advertisement
ಠಾಣೆಗೆ ತಾರಾ, ಶ್ರುತಿ ಭೇಟಿ: ಯುವತಿ ಮೇಲಿನ ದೌರ್ಜನ್ಯ ವಿಚಾರ ತಿಳಿದ ಕೂಡಲೇ ವಿಧಾನಪರಿಷತ್ ಸದಸ್ಯೆ ಚಿತ್ರ ನಟಿ ತಾರಾ ನೇತೃತ್ವದಲ್ಲಿ ವಿಧಾನಪರಿಷತ್ ಸದಸ್ಯೆ ಜಯಮ್ಮ ಬಲರಾಜ್, ವೀಣಾ ಅಚ್ಚಯ್ಯ ಹಾಗೂ ಶಾಸಕಿ ವಿನೀಶಾ ನಿರೋ ಅವರು ಬಾಣಸವಾಡಿ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಇದಾದ ನಂತರ ಚಲನಚಿತ್ರ ನಟಿ, ಬಿಜೆಪಿ ನಾಯಕಿ ಶ್ರುತಿ ಅವರು ಠಾಣೆಗೆ ತೆರಳಿ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು.
ಆಯುಕ್ತರ ಮೊಕ್ಕಾಂ: ಈ ಪ್ರಕರಣದ ತನಿಖಾ ಸಾರಥ್ಯ ಹೊತ್ತಿರುವ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಬುಧವಾರ ದಿನವೀಡಿ ಬಾಣಸವಾಡಿ ಠಾಣೆಯಲ್ಲಿ ಬೀಡು ಬಿಟ್ಟು ಶಂಕಿತ ಆರೋಪಿಗಳ ಖುದ್ದು ವಿಚಾರಣೆ ನಡೆಸಿದರು. ಅಲ್ಲದೆ, ಡಿಸಿಪಿಗಳಾದ ಡಾ.ಪಿ.ಎಸ್. ಹರ್ಷ ಹಾಗೂ ಅಜಯ್ ಹಿಲೋರಿ ಸಹ ಉಪಸ್ಥಿತರಿದ್ದರು.
ಪೋಷಕರ ಪ್ರತಿಭಟನೆ: ಪೊಲೀಸರು ವಶಕ್ಕೆ ಪಡೆಯಲಾಗಿರುವ ಯುವಕರ ಪೋಷಕರು ಬಾಣಸವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ನಮ್ಮ ಮಕ್ಕಳ ಪಾತ್ರ ಇಲ್ಲ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಇಂದು ಬಿಜೆಪಿ ಪ್ರತಿಭಟನೆ: ಗುರುವಾರ ಸಂಸದೆ ಶೋಭಾ ಕರೆಂದ್ಲಾಜೆ ನೇತೃತ್ವದಲ್ಲಿ ರಾಜ್ಯ ಮಹಿಳಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಮೌರ್ಯ ಹೋಟೆಲ್ ಜಂಕ್ಷನ್‌ನಲ್ಲಿ ನಡೆಯಲಿರುವ ಭಾರತಿ ಶೆಟ್ಟಿ, ಚಿತ್ರ ನಟಿ ಶ್ರುತಿ ಪಾಲ್ಗೊಳ್ಳಲಿದ್ದಾರೆ.
ಕಮ್ಮನಹಳ್ಳಿಯಲ್ಲಿ ನಡೆದಿರುವ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಶೀಘ್ರದಲ್ಲೇ ಬಂಧಿಸುತ್ತೇವೆ. ನಗರದಲ್ಲಿ ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ. -ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದೇವೆ. ಈ ಕೃತ್ಯದ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಗುರುವಾರ ಪ್ರಕರಣದ ಸಂಪೂರ್ಣ ಚಿತ್ರಣ ತಿಳಿಯಲಿದೆ.
-ಹೇಮಂತ್ ನಿಂಬಾಳ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ ನನ್ನ ಮನೆ ಸನಿಹದಲ್ಲೇ ಯುವತಿ ಮೇಲೆ ನಡೆದಿರುವ ದೃಶ್ಯಾವಳಿ ನೋಡಿ ಆಘಾತವಾಯಿತು. ತಪ್ಪಿತ್ಥರ ವಿರುದ್ಧ ದೂರು ನೀಡಲು ಸಂತ್ರಸ್ತೆ ನಿರಾಕರಿಸಿದರು. ಆದರೆ, ಈ ಬಗ್ಗೆ ನಾನೇ ಕೆಲವರಿಗೆ ಮಾಹಿತಿ ನೀಡಿ ಪ್ರಕರಣ ಬಹಿರಂಗಗೊಳಿಸಿದೆ.
-ಫ್ರಾನ್ಸಿಸ್, ಸಂತ್ರಸ್ತ ಯುವತಿ ಮನೆ ಪಕ್ಕದ ನಿವಾಸಿ