Advertisement
ಅವಯವ ಎಂದರೆ ಚಲನಾಂಗಗಳು ಎಂದಾಗಿರುವಾಗ ಕಸಿ ಮಾಡುವಿಕೆ ಎಂದರೇನು ಎಂದು ತಿಳಿದುಕೊಳ್ಳೋಣ. ನಮ್ಮದೇ ದೇಹದ ಅಂಗಗಳನ್ನು ಕಸಿ ಅಥವಾ ಗ್ರಾಫ್ಟಿಂಗ್ ಮಾಡಬಹುದೇ? ಎರಡು ಗಿಡಗಳನ್ನು ಜೋಡಣೆ ಮಾಡುವಂತೆ ನಮ್ಮಲ್ಲಿನ ಅಂಗಗಳ ಒಂದು ಭಾಗವನ್ನು ಕೊಯ್ದು ಜೋಡಿಸಲಾಗದು ಆದರೆ ಪೂರ್ಣವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬಹುದು. ಅದೇ transplantation.
Related Articles
Advertisement
“ಅವ’ ಎಂದಾಗ ದೂರದವರೇ ಆಗಿರುವುದರಿಂದ ಅದಕ್ಕೆ ಹೆಚ್ಚು ತಲೆ ಬಿಸಿಯೇ ಬೇಡ ಆದರೆ ಬದಿಯಲ್ಲೇ ಇರುವವರನ್ನು ಅಥವಾ ಬಗಲಲ್ಲೇ ಇರುವವರನ್ನು ದೂರದವರಂತೆ ಕಾಣುವ ಪರಿಯ ಬಗ್ಗೆಯೇ ಅಲ್ಲವೇ ಬಸವಣ್ಣನವರು ಹೇಳಿರೋದು? “ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ’. ಇವನ್ಯಾರೋ ಏನೋ ಎಂಬ ಭಾವ ಎನ್ನಲಿ ಮೂಡದಿರಲಿ, ಎಲ್ಲರೂ ಕೂಡಲ ಸಂಗಮನ ಮಕ್ಕಳೇ ಎಂಬ ಭಾವವೇ ಎನ್ನಲ್ಲಿ ಸದಾ ಮೂಡಲಿ ಎಂಬುದೇ ವಚನದ ಅರ್ಥವಿರಬಹುದೇ?
ಈ ವಚನದ ಮಾತುಗಳನ್ನು ಬಸವಣ್ಣನವರು ಇತರರಿಗೆ ಹೇಳಿರಬಹುದು, “ಎಂದೆಣಿಸದಿರಯ್ಯಾ’ ಎಂದು ಹೇಳುವ “ಮೂಲಕ ಲೋಕವನ್ನು ಎಚ್ಚರಿಸಿದ್ದಾರೆ ಎಂದುಕೊಂಡಿದ್ದೆ ಆದರೆ ಪದ ಬಳಕೆಯು “ಎಂದೆನಿಸದಿರಯ್ಯಾ’ ಎಂದಾಗ ಅವರ ಬಗ್ಗೆಯೇ ಹೇಳಿಕೊಳ್ಳುವ ಮೂಲಕ ಮೊದಲಿಗೆ ಅಂತರಂಗ ಶುದ್ಧಿ ಅನಂತರ ಬಹಿರಂಗ ಶುದ್ಧಿಯಾಗುತ್ತಿದೆ ಎನಿಸತೊಡಗಿತು.ಈಗ ಅಂತರಂಗ ಎಂಬ ಪದ ಬಳಸಿದೆ. ಸಾಮಾನ್ಯವಾಗಿ ಕಸಿ ಮಾಡುವಿಕೆಯ ಚಿತ್ರ ನೋಡಿದಾಗ ಅಥವಾ ಚಿತ್ರಣ ಮೂಡಿಸಿಕೊಂಡಾಗ ಅದನ್ನು ಬಲಬದಿಯಲ್ಲಿ ಕತ್ತರಿಸಿದಂತೆ ಕಾಣುತ್ತದೆ. ನಾವು ಎಡಬದಿಯಲ್ಲಿ ಜೋಡಿಸುತ್ತಾ ಸಾಗೋಣ. “ರಂಗ’ ಮೂಲ. “ತ’ ಸೇರಿದಾಗ “ತರಂಗ’. ಇದಕ್ಕೆ “ಅಂ’ ಸೇರಿದಾಗ “ಅಂತರಂಗ’. ಅಂತರಂಗ ಶುದ್ಧಿಯಾಗಬೇಕೆಂದರೆ ರಂಗನೆಂಬ ತರಂಗಗಳು ಹೆಚ್ಚಬೇಕು. ಇಂಥಾ ತರಂಗಗಳು ಅನಂತವಾದಾಗ ಅದು “ಅನಂತರಂಗ’ವಾಗುತ್ತದೆ. ಅವನ ಗುಣಗಳನ್ನು ಸ್ಮರಿಸಿದರೆ ಗುಣಾಂತರಂಗವೂ ಆಗುತ್ತದೆ, ಮುಂದೆ ಅದು ಸುಗುಣಾಂತರಂಗವೂ ಆಗುತ್ತದೆ. ಒಂದೊಂದೂ ಕೊಂಬೆಯನ್ನು ನಾವು ಹೇಗೆ ಕಸಿ ಮಾಡುತ್ತಾ ಬೆಳೆಸುತ್ತೇವೆಯೋ ಅದರಂತೆ ಭಾಷೆಯೂ ಬೆಳೆಯುತ್ತದೆ, ಬುದ್ಧಿಯೂ ಬೆಳೆಯುತ್ತದೆ. ವಿಷಯಾಂತರವಾಗಿ ಬಹಳ ಸಮಯವಾಯ್ತು. ಮತ್ತೆ ‘ಅವ’ ಎಂಬ ಪದಕ್ಕೆ. ಈ “ಅವ’ದಲ್ಲಿ “ಅ’ ಎಂಬುದು ಸ್ವರ ಎಂಥದ್ದು ಎಂದರೆ, “ವ’ ಎಂಬುದರ ಹಿಂದೆಯೇ ಸೇರಿ ಅದನ್ನು “ಅವರ್ಗೀಯ ವ್ಯಂಜನ’ ಎಂಬ ಪಟ್ಟ ದೊರಕಿಸಿಕೊಟ್ಟಿದೆ. “ಅವ’ ಪದದ ಈ ಮೊದಲ ಕಸಿಯನ್ನು “ಅವರ್ಗೀಯ’ಕ್ಕೆ ನೀಡಬಹುದೇ? ಒಂದರ್ಥದಲ್ಲಿ ಸರಿ, ಮತ್ತೊಂದರ್ಥದಲ್ಲಿ ಇಲ್ಲ. ಹೇಗೆ? “ಅವ’ ಎಂಬುದನ್ನು ಮತ್ತೂ ಕಸಿ ಮಾಡಿ “ಅ’ ಮತ್ತು “ವ’ ಎಂದು ಮಾಡಿದಾಗ ಮಾತ್ರ ಅದು ಸರಿಯಾದ ಕಸಿ. “ಅವ’ ಎಂಬುದಕ್ಕೆ “ರ್ಗೀಯ’ ಎಂಬುದನ್ನು ಸೇರಿಸಲಾಗದು.
ಈಗ ಮತ್ತೊಂದು ಆಲೋಚನೆ. ಕಸಿ ಮಾಡುವಿಕೆಯ ವಿಚಾರವನ್ನೇ ಪದಗಳನ್ನು ಬೆಳೆಸುವ ವಿಚಾರದಲ್ಲಿ ಚಿಂತನೆ ಮಾಡುವಾಗ, “ಅವ’ ಪದವನ್ನೇ ಉದಾಹರಣೆಯಾಗಿ ತೆಗೆದುಕೊಂಡು ಅದಕ್ಕೆ ಸೇರಿಸುವಾ ಆ ಮಗದೊಂದು ಪದ ಇರಲೇಬೇಕೆ? ಹೌದು ಇರಬೇಕು ಎಂದರೆ ಈಗಾಗಲೇ ವ್ಯಾಕರಣದಲ್ಲಿ ಕಸಿ ಮಾಡಿಯಾಗಿದೆ. ಅದೇ ಅಲ್ಲವೇ ಸಂಧಿ, ಸಮಾಸಗಳು? ಗ್ರಾಫ್ಟಿಂಗ್ ಎಂಬುದು ಗ್ರಾಮರ್‌ನಲ್ಲಿ ಈಗಾಗಲೇ ಹಾಸುಹೊಕ್ಕಾಗಿದೆ. ಹಾಗಾಗಿ “ಅವರ್ಗೀಯ’ ಪದ ಖಂಡಿತ ಸಲ್ಲುತ್ತದೆ. ಪುಷ್ಪದ ಚೆಲುವು ಮತ್ತು ಸುವಾಸನೆಯನ್ನು ಚೆಲ್ಲಬಲ್ಲದು. “ಅವಕಾಶ’ ಜೀವನದಲ್ಲಿ ಅವಕಾಶಗಳು ಬಂದು ಬಾಗಿಲು ತಟ್ಟುತ್ತದೆ ಆದರೆ ಆಲಿಸುವ ಕಿವಿ ಇಲ್ಲದೇ ಹೋದಾಗ, ಸ್ಪಂದಿಸುವ ಹೃದಯ ನಿಷ್ಕ್ರಿಯವಾದಾಗ ಆ ಅವಕಾಶಗಳು ಹಾಗೆಯೇ ಸಾಗಿಬಿಡುತ್ತದೆ. ಶ್ರೀನಿವಾಸನಿಗೆ ಆ ಶ್ರೀನಿವಾಸ ಮೂಗುತಿಯ ಸಂದರ್ಭವನ್ನು ಸೃಷ್ಟಿಸಿ ಒಂದು ಅವಕಾಶ ನೀಡಿದ್ದೇ ಪುರಂದರದಾಸರಾಗಲು ಸಾಕಿತ್ತು. ಮರಣಾವಸ್ಥೆಯಲ್ಲಿದ್ದ ಕನಕ ನಾಯಕನಿಗೆ ಆ ಆದಿ ಕೇಶವ ನೀಡಿದ್ದು ಒಂದು ಸುವರ್ಣ ಅವಕಾಶ. ಕನಕ ನಾಯಕ “ಕನಕದಾಸರಾದರು. ಅವಕಾಶಗಳು ಟೈಮ್ ಸಿಕ್ಕಾಗಲೆಲ್ಲ ಬಂದೂ ಬಂದೂ ಬಾಗಿಲು ಬಡಿಯೋದಿಲ್ಲ. ಅವ ನೀಡಿದಾದ ಅವಕಾಶ ಬಳಸಿಕೊಳ್ಳಬೇಕು ಮಾಡದೇ ಸಾವಕಾಶ.
ಗುಣಾವಗುಣಗಳ ಬಗ್ಗೆ ಕೇಳಿಯೇ ಇರುತ್ತೀರಾ. ಇಲ್ಲಿ ಅವ ಎಂಬ ಪದ ಗುಣಕ್ಕೆ ಸೇರಿದಾಗ ಋಣಾತ್ಮಕವಾಗಿ ಮಾರ್ಪಾಡಾಗುತ್ತದೆ.