ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಡುವ,ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಜನಪ್ರಿಯ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ಗ್ರ್ಯಾಂಡ್ ಫಿನಾಲೆ ಭಾನುವಾರ ರಾತ್ರಿ ಅಂತ್ಯವಾಗಿದ್ದು, ಮಾಡರ್ನ್ ರೈತ ಖ್ಯಾತಿಯ ಶಶಿ ಅವರು ವಿನ್ನರ್ ಆಗಿದ್ದಾರೆ.
ಫೈನಲ್‌ನಲ್ಲಿ ನವೀನ್ ಸಜ್ಜು, ಶಶಿ ಮತ್ತು ಕವಿತಾ ಗೌಡ ಅವರ ನಡುವೆ ತೀವ್ರ ಪೈಪೋಟಿ ಇತ್ತು. ಕವಿತಾ ಗೌಡ ಅವರು ಮೊದಲು ಎಲಿಮಿನೇಟ್ ಆದರೆ , ನವೀನ್ ಫೈನಲ್‌ನಲ್ಲಿ ತೀವ್ರ ಸ್ಪರ್ಧೆ ಒಡ್ಡಿ ರನ್ನರ್ ಅಪ್ ಆದರು. ಅಂತಿಮವಾಗಿ ಸುದೀಪ್ ಅವರು ಶಶಿ ಅವರ ಕೈ ಎತ್ತುವ ಮೂಲಕ ಕೂತುಹಲಕ್ಕೆ ಅಂತ್ಯ ಹಾಡಿದರು.
ಚಿಕ್ಕಬಳ್ಳಾಪುರದ ಚಿಂತಾಮಣಿಯವರಾದ ಶಶಿ ಸಾಮಾನ್ಯ ವಿಭಾಗದಲ್ಲಿ ಬಿಗ್‌ಬಾಸ್‌ಗೆ ಎಂಟ್ರಿ ನೀಡಿದ್ದರು. ಆಕರ್ಷಕ ರೂಪು ಹೊಂದಿರುವ ಇವರು ಮಾಡರ್ನ್ ರೈತ, ಕೃಷಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. 50 ಲಕ್ಷ ರೂಪಾಯಿ ಬಹುಮಾನ ಮತ್ತು ಟ್ರೋಫಿಯನ್ನು ಶಶಿ ತನ್ನದಾಗಿಸಿಕೊಂಡಿದ್ದಾರೆ.