ಮುಂಬಯಿ: ಜಾಗತಿಕ ಷೇರುಪೇಟೆಯಲ್ಲಿನ ಭರ್ಜರಿ ವಹಿವಾಟು ಹಾಗೂ ಕೋವಿಡ್ 19 ಪ್ರಕರಣಗಳ ಸಂಖ್ಯೆಯ ಇಳಿಕೆಯ ಪರಿಣಾಮ ಮುಂಬಯಿ ಷೇರುಪೇಟೆಯ ಸೋಮವಾರ(ಜೂನ್ 28)ದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 139.54 ಅಂಕ ಏರಿಕೆಯಾಗಿದ್ದು, ನಿಫ್ಟಿ ದಾಖಲೆ ಪ್ರಮಾಣದ ಗಡಿ ತಲುಪಿದೆ.
ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಯಲ್ಲಿ 46 ಸಾವಿರ ಕೋವಿಡ್ ಪ್ರಕರಣ ಪತ್ತೆ, 979 ಸಾವು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 139.54 ಅಂಕಗಳ ಏರಿಕೆಯೊಂದಿಗೆ 53,064 ಅಂಕಗಳೊಂದಿಗೆ ದಾಖಲೆಯ ವಹಿವಾಟು ನಡೆಸಿದ್ದು, ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 33.05 ಅಂಕಗಳ ಏರಿಕೆಯಿಂದ 15,915.65ರ ಗಡಿ ದಾಟಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಿಂದ ಒಎನ್ ಜಿಸಿ, ಸಿಪ್ಲಾ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಎಸ್ ಬಿಐ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಎಚ್ ಡಿಎಫ್ ಸಿ ಲೈಫ್, ಟಿಸಿಎಸ್, ಬಜಾಜ್ ಆಟೋ, ಎಲ್ ಆ್ಯಂಡ್ ಟಿ ಮತ್ತು ಮಾರುತಿ ಷೇರುಗಳು ನಷ್ಟ ಅನುಭವಿಸಿದೆ.
ಏಷ್ಯನ್ ಪೇಂಟ್ಸ್ ಷೇರುಗಳು ಹೆಚ್ಚಿನ ಲಾಭ ಗಳಿಸಿದೆ, ಇನ್ನುಳಿದಂತೆ ಡಾ.ರೆಡ್ಡೀಸ್, ಎನ್ ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.