ಮುಂಬೈ: ಬಾಂಬೆ ಷೇರು(Stock Market) ಮಾರುಕಟ್ಟೆಯ ಬುಧವಾರ (ಡಿ.04) ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಪಬ್ಲಿಕ್ ಸೆಕ್ಟರ್ ಎಂಟರ್ ಪ್ರೈಸ್ ಮತ್ತು ಐಟಿ ಸೆಕ್ಟರ್ ನ ಷೇರುಗಳ ಖರೀದಿ ಭರಾಟೆಯೊಂದಿಗೆ ಸಂವೇದಿ ಸೂಚ್ಯಂಕ ಏರಿಕೆಯೊಂದಿಗೆ ಆರಂಭಗೊಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 248.37 ಅಂಕಗಳಷ್ಟು ಏರಿಕೆಯೊಂದಿಗೆ 80,094.12 ಅಂಕಗಳ ಗಡಿ ದಾಟಿ ವಹಿವಾಟು ಮುಂದುವರಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 76.90 ಅಂಕ ಜಿಗಿತದೊಂದಿಗೆ 24,534.05 ಅಂಕಗಳೊಂದಿಗೆ ವಹಿವಾಟು ನಡೆಸಿದೆ.
ಷೇರುಪೇಟೆ ಖರೀದಿ ಟ್ರೆಂಡ್ ಪಾಸಿಟಿವ್ ಆಗಿದ್ದು, ಮಾರುಕಟ್ಟೆಯಲ್ಲಿ 1,851 ಷೇರುಗಳ ಮೌಲ್ಯ ಹೆಚ್ಚಳವಾಗಿದ್ದು, ಸುಮಾರು 409 ಷೇರುಗಳ ಮೌಲ್ಯ ಕುಸಿತ ಕಂಡಿರುವುದಾಗಿ ವರದಿ ತಿಳಿಸಿದೆ.
ಇಂದಿನ ವಹಿವಾಟಿನಲ್ಲಿ ಎನ್ ಟಿಪಿಸಿ, ಟೆಕ್ ಮಹೀಂದ್ರ, ಎಲ್ & ಎಎಂಪಿ, ಐಟಿಸಿ, ಟಿಸಿಎಸ್, ಇನ್ಫೋಸಿಸ್, ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರ& ಮಹೀಂದ್ರಾ ಮತ್ತು ಎಚ್ ಸಿಎಲ್ ಟೆಕ್ ಷೇರುಗಳು ಲಾಭ ಕಂಡಿದೆ.
ಮತ್ತೊಂದೆಡೆ ಭಾರ್ತಿ ಏರ್ ಟೆಲ್, ರಿಲಯನ್ಸ್, ಐಸಿಐಸಿಐ ಬ್ಯಾಂಕ್, ಆಲ್ಟ್ರಾ ಟೆಕ್ ಸಿಮೆಂಟ್, ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ನಷ್ಟ ಕಂಡಿದೆ. ಸಿಯೋಲ್, ಬ್ಯಾಂಕಾಕ್ ಮತ್ತು ಚೀನಾದ ಷೇರುಪೇಟೆ ಸೂಚ್ಯಂಕ ಕುಸಿತ ಕಂಡಿದೆ.
ಜಪಾನ್, ಹಾಂಗ್ ಕಾಂಗ್, ಜಕಾರ್ತಾ ಮತ್ತು ಅಮೆರಿಕದ ಷೇರುಪೇಟೆ ಸೂಚ್ಯಂಕ ಏರಿಕೆಯೊಂದಿಗೆ ವಹಿವಾಟು ಮುಂದುವರಿಸಿದೆ. ಭಾರತೀಯ ಷೇರುಪೇಟೆಗೆ ಡಿಸೆಂಬರ್ 3ರಂದು Foreign institutional Investors 3,664 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಹರಿದು ಬಂದಿದ್ದು, ಈ ಸಂದರ್ಭದಲ್ಲಿ ದೇಶಿಯ institutional investors 250 ಕೋಟಿ ರೂ. ಮೌಲ್ಯದ ಈಕ್ವಿಟಿಯನ್ನು ಮಾರಾಟ ಮಾಡಿದ್ದರು.