Advertisement

Stock market; ಲಾಭದ ಆಸೆಗೆ 11 ಕೋಟಿ ರೂ. ಕಳಕೊಂಡ್ರು!

11:55 PM Nov 28, 2024 | Team Udayavani |

ಮುಂಬೈ: ಹಡಗಿನ ನಿವೃತ್ತ, 75 ವರ್ಷದ ಕ್ಯಾಪ್ಟನ್‌ ಒಬ್ಬರು ಸೈಬರ್‌ ವಂಚನೆಗೆ 11.16 ಕೋಟಿ ರೂ. ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಷೇರು ಪೇಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚು ಹಣ ಬರಲಿದೆ ಎಂದು ನಂಬಿ ಮೋಸ ಹೋಗಿದ್ದಾರೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಫ್ ಇಬ್ರಾಹಿಂ ಮನ್ಸೂರಿ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 33 ಡೆಬಿಟ್‌ ಕಾರ್ಡ್‌ ಮತ್ತು ವಿವಿಧ ಬ್ಯಾಂಕುಗಳ 12 ಚೆಕ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Advertisement

ಸೆನ್ಸೆಕ್ಸ್‌ 1190, ನಿಫ್ಟಿ 360 ಅಂಕ ಪತನ‌: ಹೂಡಿಕೆದಾರರಿಗೆ ನಷ್ಟ
ದಿನದಾರಂಭದ ಏರಿಕೆಯ ಹೊರತಾ­ಗಿಯೂ ಭಾರತೀಯ ಷೇರುಪೇಟೆ ಗುರುವಾರ( ನ28) ಕುಸಿತವನ್ನು ದಾಖಲಿಸಿದೆ. ಸೆನ್ಸೆಕ್ಸ್‌ 1190.34 ಅಂಕ ಕುಸಿದು 79043.74ರಲ್ಲಿ ವ್ಯವಹಾರ ಮುಗಿಸಿತು. ಅದೇ ರೀತಿ, ನಿಫ್ಟಿ ಕೂಡ 360.75 ಅಂಕ ಕುಸಿದು 23914.15ರಲ್ಲಿ ತನ್ನ ದಿನದ ವಹಿವಾಟು ಪೂರ್ಣಗೊಳಿಸಿತು. ಜಾಗತಿಕ ಷೇರುಪೇಟೆಗಳ ಕುಸಿತದ ಪರಿಣಾಮ ರಿಲಯನ್ಸ್‌ ಇಂಡ್‌ಸ್ಟ್ರೀಸ್‌, ಎಚ್‌ಡಿಎಫ್ಸಿ ಬ್ಯಾಂಕ್‌ ಸೇರಿ ಕೆಲವು ಪ್ರಮುಖ ಷೇರುಗಳಲ್ಲಿ ಕುಸಿತವಾಗಿದ್ದೇ ಷೇರುಪೇಟೆ ತಲ್ಲಣಕ್ಕೆ ಕಾರಣವಾಗಿದೆ. ಹೀಗಾಗಿ, ಹೂಡಿಕೆದಾರರ ಸಂಪತ್ತು 1.50 ಲಕ್ಷ ಕೋಟಿ ರೂ. ನಷ್ಟವಾಗಿದೆ. ಅದಾನಿ ಗ್ರೂಪ್‌ನ 11 ಕಂಪನಿಗಳ ಷೇರುಗಳ ಪೈಕಿ 5 ಕಂಪನಿಗಳ ಷೇರುಗಳು ಭಾರೀ ಏರಿಕೆಯನ್ನು ದಾಖಲಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next