Advertisement

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

06:58 PM Dec 19, 2024 | Team Udayavani |

ಹೊಸದಿಲ್ಲಿ: ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಖರ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ‘ಉಪರಾಷ್ಟ್ರಪತಿಯ ಪ್ರತಿಷ್ಠೆಗೆ ಮಾರಕ’ ಎಂಬ ಕಾರಣ ನೀಡಿ ಉಪಸಭಾಪತಿ ಹರಿವಂಶ್ ಗುರುವಾರ(ಡಿ19) ತಿರಸ್ಕರಿಸಿದ್ದಾರೆ.

Advertisement

ಉಪಸಭಾಪತಿ ಹರಿವಂಶ್ ಅವರು ವಿವರವಾದ ಆದೇಶದಲ್ಲಿ, ‘ಮಂಡಿಸಿದ ಅವಿಶ್ವಾಸ ನಿರ್ಣಯ ದೋಷಪೂರಿತ. ಸಭಾಪತಿಯ ಖ್ಯಾತಿ ಹಾಳುಮಾಡಲು ತರಾತುರಿಯ ನಿರ್ಧಾರ’ ಎಂದು ಹೇಳಿದ್ದಾರೆ.

‘ಅವಿಶ್ವಾಸ ನಿರ್ಣಯ ಸಲ್ಲಿಸಲು ಅಗತ್ಯವಿರುವ 14 ದಿನಗಳ ಕಡ್ಡಾಯ ಸೂಚನೆಯನ್ನು ಒದಗಿಸಲಾಗಿಲ್ಲ. ಹೆಚ್ಚುವರಿಯಾಗಿ, ನೋಟಿಸ್‌ನಲ್ಲಿ ಧನ್ಖರ್ ಅವರ ಹೆಸರನ್ನು ತಪ್ಪಾಗಿ ಬರೆಯಲಾಗಿದೆ ಎಂದು ನಿರಾಕರಣೆಯ ಕಾರಣಗಳನ್ನು ಹರಿವಂಶ್ ವಿವರಿಸಿದ್ದಾರೆ.

ಸಂವಿಧಾನದ ಪರಿಚ್ಛೇದ 67(ಬಿ) ಅಡಿಯಲ್ಲಿ ಸಲ್ಲಿಸಲಾದ ನಿರ್ಣಯವನ್ನು ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಬೆಂಬಲಿಸಿದ್ದು, ಸಂಸತ್ತಿನ ಮೇಲ್ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next