ಮುಂಬೈ:ಮಾಸಿಕ ಫ್ಯೂಚರ್ಸ್ ಆ್ಯಂಡ್ ಆಪ್ಶನ್ಸ್ ಒಪ್ಪಂದದ ಮುಕ್ತಾಯದ ದಿನವಾದ ಗುರುವಾರ (ನವೆಂಬರ್ 24) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪುವ ಮೂಲಕ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಉಪೇಂದ್ರ ಆರೋಗ್ಯದ ಊಹಾಪೋಹಗಳು; ವಿಡಿಯೋ ಬಿಡುಗಡೆ ಮಾಡಿದ ರಿಯಲ್ ಸ್ಟಾರ್
ಎನ್ ಎಸ್ ಇ ನಿಫ್ಟಿ ಕೂಡಾ 52 ವಾರಗಳಲ್ಲಿಯೇ ಗರಿಷ್ಠ ಮಟ್ಟವನ್ನು ತಲುಪಿ, ವಹಿವಾಟಿನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಜಾಗತಿಕ ಷೇರುಮಾರುಕಟ್ಟೆಯ ಬಿರುಸಿನ ವಹಿವಾಟಿನ ಪರಿಣಾಮ ಹೂಡಿಕೆದಾರರಿಗೆ ಸತತ ಮೂರನೇ ದಿನವೂ ಸೆನ್ಸೆಕ್ಸ್ ಭರ್ಜರಿ ಏರಿಕೆಯ ವಹಿವಾಟನ್ನು ತಂದುಕೊಟ್ಟಿದೆ.
ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 762.10 ಅಂಕಗಳ ಏರಿಕೆಯೊಂದಿಗೆ 62, 272.68ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 216.80 ಅಂಕಗಳ ಜಿಗಿತದೊಂದಿಗೆ 18,484.10 ಅಂಕಗಳ ದಾಖಲೆ ವಹಿವಾಟಿನೊಂದಿಗೆ ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಅಪೋಲೊ ಹಾಸ್ಪಿಟಲ್ಸ್, ಎಚ್ ಡಿಎಫ್ ಸಿ ಲೈಫ್, ಬಿಪಿಸಿಎಲ್, ಇನ್ಫೋಸಿಸ್, ಟಾಟಾ ಕನ್ಸೂಮರ್ ಪಾಡಕ್ಟ್ಸ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಸಿಪ್ಲಾ, ಕೋಲ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಮೋಟಾರ್ಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ನಷ್ಟ ಕಂಡಿದೆ.