Advertisement

ಸಮಬಾಳು-ಸಮಪಾಲು ತತ್ವ ಪ್ರತಿಪಾದಿಸಿದ್ದ ಶರಣರು

12:13 PM Mar 03, 2018 | Team Udayavani |

ಬೀದರ: ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವ ಹಾಗೂ ಸ್ವತ್ಛ ಸಮಾಜದ ಕನಸನ್ನು ಅಂದು ಬಸವಾದಿ ಶರಣರು ಕಂಡಿದ್ದರು. ಆ ಕನಸು ನನಸು ಮಾಡಿಸಿ ತೋರಿಸಿ ವಿಶ್ವಕ್ಕೆ ಶರಣರು ಮಾದರಿಯಾದರು ಎಂದು ಮಾತೆ ಸತ್ಯಾದೇವಿ ನುಡಿದರು.

Advertisement

ನಗರದ ಬಸವ ಮಂಟಪದಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮಾಸಿಕ ಕಲ್ಯಾಣ ಕ್ರಾಂತಿ ಹುಣ್ಣಿಮೆ ಮತ್ತು ಬಸವ ಜ್ಯೋತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಜಾತಿ, ವರ್ಣ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಸಮಗಾರ ಹರಳಯ್ಯನವರ ಮಗ ಶೀಲವಂತನಿಗೂ, ಬ್ರಾಹ್ಮಣರ ಮಧುವರಸರ ಮಗಳು ಲಾವಣ್ಯಳಿಗೂ ಅಂತರ್ಜಾತಿ ಮದುವೆ ಮಾಡಿಸಿದರು. ಇದಕ್ಕಾಗಿ ಅವರನ್ನು ಆನೆ ಕಾಲಿಗೆ ಕಟ್ಟಿ ಎಳೆಹೂಟೆ ಶಿಕ್ಷೆ ವಿ ಧಿಸಲಾಯಿತು. ಶರಣರೆಲ್ಲ ಕಲ್ಯಾಣದಿಂದ ಚದುರಿದರು. ವಚನ ಸಾಹಿತ್ಯವನ್ನು ಸುಡಲಾಯಿತು. ಹೀಗೆ ಕಲ್ಯಾಣ ಕ್ರಾಂತಿಯ ನೆನಪಿಗಾಗಿ ಈ ಹುಣ್ಣಿಮೆಯನ್ನು ಕಲ್ಯಾಣ ಕ್ರಾಂತಿ ಹುಣ್ಣಿಮೆ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸಮಾಜ ಸೇವಕ ದಶಪ್ಪ ಬೋರಗೊಂಡ ಮಾತನಾಡಿ, ಬಸವಾದಿ ಶರಣರ ಷಡ್‌ಗಣಾಧೀಶರಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಕೂಡಾ ಒಬ್ಬರಾಗಿದ್ದರು. ಹಾದಿ ಹಾದಿಗೆ ಗುಡಿಗಳನ್ನು ಕಟ್ಟುತ್ತ, ಬೀದಿ ಬೀದಿಗೆ ಕೆರೆಗಳನ್ನು ಕಟ್ಟಿಸುತ್ತ ಸಾಗಿದ್ದರು. ಅಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಿದ್ಧರಾಮರನ್ನು ಅಲ್ಲಮಪ್ರಭು ಮತ್ತು ಬಸವಣ್ಣನವರು ಪರಿವರ್ತಿಸಿ, ಚೆನ್ನಬಸವಣ್ಣನವರಿಂದ ಲಿಂಗದೀಕ್ಷೆ ಕೊಡಿಸಿ ಶಿವಯೋಗಿಯನ್ನಾಗಿ ಮಾಡಿದರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಸಿದ್ಧರಾಮರ ಕೊಡುಗೆ ಅಪಾರವಾಗಿತ್ತು. ಹಾಗಾಗಿ ಶರಣ ಸಂಕುಲದಲ್ಲಿ ಅವರ ಹೆಸರು ಅಮರವಾಗಿ ಉಳಿದಿದೆ ಎಂದು ಹೇಳಿದರು.

ಡಾ| ನಾಗಶೆಟ್ಟಿ ಪಾಟೀಲ ಗಾದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ್‌ ಪಾಟೀಲ ಖಾಜಾಪುರ ಅಧ್ಯಕ್ಷತೆ ವಹಿಸಿದ್ದರು. ಶಿವರಾಜ ಪಾಟೀಲ ಅತಿವಾಳ ಧ್ವಜಾರೋಹಣ ನೆರವೇರಿಸಿದರು. ನಾಗಶೆಟ್ಟಿ ದಾಡಗಿ, ಕಾಶಪ್ಪ, ಸೀತಾ ಅಡಿವೆಪ್ಪ ಪಟೆ° ವೇದಿಕೆಯಲ್ಲಿದ್ದರು. 

Advertisement

ಈ ಸಂದರ್ಭದಲ್ಲಿ ಬಸವ ತತ್ವಕ್ಕಾಗಿ ದುಡಿದ ಹಿರಿಯ ನಾಗರಿಕರಾದ ಅಣ್ಣೆಪ್ಪ ಮಂಗಲಗಿ, ಬಂಡೆಪ್ಪ ಅಳ್ಳಿ, ಶಿವಕುಮಾರ ಪಾಟೀಲ ಹಾರೂರಗೇರಿ ದಂಪತಿಗಳನ್ನು ಸನ್ಮಾನಿಸಲಾಯಿತು. ಗಣಪತಿ ದೇಶಮುಖ, ಗಣಪತಿ ಬಿರಾದಾರ, ಮನ್ಮಥಯ್ಯ ಸ್ವಾಮಿ, ಅಶೋಕ ಶೀಲವಂತ, ವಿವೇಕ ಪಟೆ°, ಶಾಂತಾದೇವಿ ಬಿರಾದಾರ, ಚಂದ್ರಕಲಾ ದಾಡಗಿ, ಮಹಾಲಿಂಗ ಸ್ವಾಮಿ, ಕಾಶಿನಾಥ ಸೂರ್ಯವಂಶಿ ಮತ್ತಿತರರು ಇದ್ದರು. ಸುರೇಶ ಸ್ವಾಮಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ರವಿ ಪಾಪಡೆ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next