Advertisement

ವಿಶ್ವ ಗುರು ಬಸವಣ್ಣನವರ ತತ್ವ ಸಾರ್ವಕಾಲಿಕ ಸತ್ಯ

02:31 PM Aug 29, 2022 | Team Udayavani |

ಭಾಲ್ಕಿ: ಎಲ್ಲರನ್ನೂ ಉದ್ಧಾರವಾಗುವ ಮಾರ್ಗ ಹೇಳಿಕೊಟ್ಟವರು ಬಸವಣ್ಣನವರು. ಅವರ ತತ್ವಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮಿಗಳು ಪ್ರತಿಪಾದಿಸಿದರು.

Advertisement

ಪಟ್ಟಣದ ಚನ್ನಬಸವಾಶ್ರಮದಲ್ಲಿ ತಿಂಗಳ ಪರ್ಯಂತ ಡಾ| ಬಸವಲಿಂಗ ಪಟ್ಟದ್ದೇವರಿಂದ ನಡೆದ ಶರಣರ ವಚನ ದರ್ಶನ ಪ್ರವಚನ ಕಾರ್ಯಕ್ರಮ ಸಮಾರೋಪದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ವಿಶ್ವದ ಪ್ರತಿಯೊಬ್ಬರನ್ನೂ ಉದ್ಧಾರವಾಗುವ ಮಾರ್ಗ ತೋರಿಸಿಕೊಟ್ಟ ಬಸವಣ್ಣನವರು ವಿಶ್ವಗುರುವಾಗಿದ್ದಾರೆ. ವಿಶ್ವಸಂಸ್ಥೆಯವರು ಈಗ ಗುರುತಿಸಿರುವ ಮಾನವ ಹಕ್ಕುಗಳನ್ನು ಅಣ್ಣ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ವಚನ ಸಾಹಿತ್ಯದಲ್ಲಿ ತಿಳಿಸಿದ್ದಾರೆ.

ವಿಶ್ವ ಸಂಸ್ಥೆಯವರು ಸಂಶೋಧನೆ ನಡೆಸಿ ಸದ್ಯ ಏನೇನು ತಿಳಿಸುತ್ತಲಿದ್ದಾರೋ ಅವುಗಳೆಲ್ಲವನ್ನೂ ಹನ್ನೆರಡನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ತಿಳಿಸಿ ಆಚರಿಸಿದ್ದಾರೆ. ಅದಕ್ಕಾಗಿಯೇ ಬಸವಣ್ಣನವರು ವಿಶ್ವಗುರುವಾಗಿದ್ದಾರೆ ಎಂದು ಹೇಳಿದರು.

ಶಾಸಕ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ| ಬಸವಲಿಂಗ ಪಟ್ಟದ್ದೇವರು ಸಮಾರೋಪ ನುಡಿಯಾಡಿದರು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ಇದೇ ವೇಳೆ ಶ್ರಾವಣ ಮಾಸದ ಪ್ರವಚನ ಕಾರ್ಯದಲ್ಲಿ ಒಂದು ತಿಂಗಳ ಕಾಲ ಸೇವೆ ಮಾಡಿದ ಭಕ್ತಾದಿಗಳಿಗೆ ಶ್ರೀಮಠದಿಂದ ಗೌರವಿಸಲಾಯಿತು. ಹಾಸ್ಯಕಲಾವಿದ ನವಲಿಂಗ ಪಾಟೀಲ, ವಿಶ್ವನಾಥಪ್ಪ ಜೆ.ಇ., ಜಾನಪದ ಪರಿಷತ್‌ ತಾಲೂಕು ಅಧ್ಯಕ್ಷ ವಸಂತ ಹುಣಸನಾಳೆ, ಚಂದ್ರಕಾಂತ ಬಿರಾದಾರ, ವಿರಶೆಟ್ಟಿ ಬಾವುಗೆ ಇದ್ದರು. ರಾಜು ಜುಬರೆ ಮತ್ತು ಸಂಗಡಿಗರಿಂದ ವಚನ ಸಂಗೀತ ನಡೆಯಿತು. ಪ್ರವಚನ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಮರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ವೀರಣ್ಣಾ ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next