ಉಡುಪಿ: ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಸಮಾಜದ ವಿವಿಧ ಬಿಲ್ಲವ ಸಂಘಟನೆಗಳ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮದಿನಾಚರಣೆ ಪ್ರಯುಕ್ತ ಸೆ.11ರ ಮಧ್ಯಾಹ್ನ 2 ಗಂಟೆಗೆ ಗುರು ಸಂದೇಶದ ವಾಹನ ಜಾಥಾ ನಡೆಯಲಿದೆ.
ಇದನ್ನೂ ಓದಿ:ಸಾಮಾಜಿಕ,ಧಾರ್ಮಿಕ ಬದಲಾವಣೆಗೆ ಕ್ರಾಂತಿಗಿಳಿದವರು ಶ್ರೀ ನಾರಾಯಣಗುರುಗಳು
ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ವಿವಿಧ ಸಂಘ-ಸಂಸ್ಥೆಗಳು, ನಾರಾಯಣಗುರುಗಳ ಅನುಯಾಯಿಗಳು, ಗರೋಡಿ ಪ್ರಮುಖರ ಉಪಸ್ಥಿತಿಯಲ್ಲಿ ನಾರಾಯಣಗುರುಗಳಿಗೆ ಗುರು ಮಂದಿರದಲ್ಲಿ ಪ್ರಾರ್ಥನೆ ಮಾಡಿ, ಉದ್ಯಮಿ, ಸಮಾಜದ ಹಿರಿಯರಾದ ವಿಶ್ವನಾಥ ಸನಿಲ್ ಅವರು ರಥಕ್ಕೆ ಚಾಲನೆ ನೀಡುವರು.
ಜಾಥಾದ ರಥವು ಬನ್ನಂಜೆಯಿಂದ ಹೊರಟು ಸಿಟಿ ಬಸ್‌ನಿಲ್ದಾಣ, ಜೋಡುಕಟ್ಟೆ ಮಾರ್ಗವಾಗಿ ಅಂಬಲಪಾಡಿ, ಕಿದಿಯೂರು, ಕಲ್ಮಾಡಿ, ಮಲ್ಪೆ ವೃತ್ತಕ್ಕೆ ಸುತ್ತು ಹಾಕಿ ವಡಬಾಂಡೇಶ್ವರ ವೃತ್ತ, ಸಿಟಿಜನ್ ಸರ್ಕಲ್‌ನಿಂದ ಕೊಡವೂರು, ಗರಡಿಮಜಲು ಮಾರ್ಗವಾಗಿ ಸಂತೆಕಟ್ಟೆ ಜಂಕ್ಷನ್‌ನಿಂದ ರಾ.ಹೆ. ಮೂಲಕ ಸಾಗಿ ಬನ್ನಂಜೆಯಲ್ಲಿ ಸಂಜೆ 5.30ಕ್ಕೆ ಗುರುಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ಗುರು ಸಂದೇಶದ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ತಿಳಿಸಿದ್ದಾರೆ.