Advertisement

ಶರಣ ಸಂಸ್ಕೃತಿ ಉತ್ಸವ; ಪತ್ರಕರ್ತರು ಸತ್ಯ ಹೇಳುವ ಕೆಲಸ ಮಾಡಲಿ

06:12 PM Mar 04, 2024 | Team Udayavani |

ಉದಯವಾಣಿ ಸಮಾಚಾರ
ಗೋಕಾಕ: ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪತ್ರಕರ್ತರು ಮಾಡುವ ಕಾರ್ಯ ನಿಜವಾಗಿಯೂ ಪ್ರಶಂಸನೀಯ. ಆದರೆ
ಅವರಿಗೆ ಸಿಗಬೇಕಾದ ಸ್ಥಾನ ಮಾನ ಸಿಗುತ್ತಿಲ್ಲ ಎಂದು ಹಿರಿಯ ಪತ್ರಕರ್ತ, ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನಮಕ್ಕನವರ ಹೇಳಿದರು.

Advertisement

ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 19 ನೇ ಶರಣ ಸಂಸ್ಕೃತಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಸಾಧ್ಯವಾದಷ್ಟು ಸತ್ಯವನ್ನು ಹೇಳುವ ಕಾರ್ಯ ಒಬ್ಬ ಪತ್ರಕರ್ತ ಮಾಡಬೇಕು. ಜನಸಾಮಾನ್ಯರ ತೊಂದರೆಗಳನ್ನು ಸರಕಾರಕ್ಕೆ ಮುಟ್ಟವ ರೀತಿಯಲ್ಲಿ ಪತ್ರಕರ್ತರು ಕಾರ್ಯಮಾಡಬೇಕು. ಹಿಂದಿನ ಕಾಲಘಟ್ಟದಲ್ಲಿ ಇದನ್ನು ಮಠಮಾನ್ಯಗಳು ಸಮರ್ಥವಾಗಿ ಮಾಡುತ್ತಿದ್ದವು. ಅಂತಹ ಕಾರ್ಯವನ್ನು ಇಂಧು ಶ್ರೀ ಶೂನ್ಯ ಸಂಪಾದನ ಮಠ ಮಾಡುತ್ತಿದೆ ಎಂದರು.

ಇಂದಿನ ಕಾಲದಲ್ಲಿ ಹವ್ಯಾಸಕ್ಕಾಗಿ ಪತ್ರಕರ್ತರಾಗುತ್ತಿದ್ದಾರೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಂದು
ಎಲ್ಲಾ ರಂಗದಲ್ಲಿ ನಿಜವಾದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಪತ್ರಕರ್ತರ ವೇಷದಲ್ಲಿ ದೊಡ್ಡ  ದೊಡzವರು ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ.

ಪತ್ರಿಕೋದ್ಯಮ ಆತ್ಮಸಾಕ್ಷಿಗೆ ಸಂಬಂಧಿಸಿದ ವಿಷಯವಾಗಿದೆ ಎಂದರು. ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಸಮಾಜದಲ್ಲಿ ನಡೆಯುವ ಮೌಡ್ಯವನ್ನು ತಡೆಯುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹುಮುಖ್ಯವಾಗಿದೆ. ಸೋಷಿಯಲ್‌  ಮೀಡಿಯಾ ಅಬ್ಬರದಲ್ಲಿ ನಿಜವಾದ ಮೀಡಿಯಾ ಮಾಯವಾಗುತ್ತಿದೆ. ಪತ್ರಕರ್ತ ವೃತ್ತಿ ಇರುವುದು ಸಮಾಜವನ್ನು ಒಡೆಯಲು ಅಲ್ಲ, ಸಮಾಜವನ್ನು ಕಟ್ಟಲಿಕ್ಕೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳ್ಳದ ಈ ಶರಣ ಸಂಸ್ಕೃತಿ ಉತ್ಸವ ಭಿನ್ನವಾಗಿ ಕಾರ್ಯಮಾಡುತ್ತಿದೆ. ಪತ್ರಕರ್ತರ ಸಮಸ್ಯೆಗಳನ್ನು ಸಮಾಜ ಸಹ ಗೌರವಿಸಿ, ಹಕ್ಕೊತ್ತಾಯವನ್ನು ಮಾಡಬೇಕು. ನಮ್ಮ ಸಂಸದ ನಿಧಿಯಲ್ಲಿ ಪತ್ರಕರ್ತರಿಗೆ ಸಹಾಯ ಮಾಡಲು ನಾನು ಸದಾ ಸಿದ್ಧ ಎಂದು ಭರವಸೆ ನೀಡಿದರು.

Advertisement

ತಾಲೂಕು ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿದರು. ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ
ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಟಕುರ್ಕಿ ಚೌಕಿ ಮಠದ ಬಸವಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಾಧಕ ಪತ್ರಕರ್ತರನ್ನು ಗಣ್ಯರು ಸತ್ಕರಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್‌ ಕುರಂದವಾಡೆ, ತಾಲೂಕು ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಮೂಡಲಗಿ
ತಾಲೂಕು ಅಧ್ಯಕ್ಷ ಕೃಷ್ಣ ಗಿರೇನ್ನವರ, ಬಿ.ಯು ಚನ್ನಬಸಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಸಾದಿಕ ಹಲ್ಯಾಳ, ಶರಣ ಸಂಸ್ಕೃತಿ ಉತ್ಸವ ಅಧ್ಯಕ್ಷ ಸಂತೋಷ ಸೋನವಾಲಕರ, ಕೋಶಾಧ್ಯಕ್ಷ ಬಸವರಾಜ ಮುರಗೋಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next