ಮುಂಬೈ: ಪಾಕಿಸ್ಥಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ತನ್ನ ಸಾರ್ವಕಾಲಿಕ ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಅಚ್ಚರಿ ಎಂಬಂತೆ ಆ ತಂಡದಲ್ಲಿ ಭಾರತದ ಸಚಿನ್ ತೆಂಡೂಲ್ಕರ್, ಭಾರತಕ್ಕೆ ವಿಶ್ವಕಪ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಅಥವಾ ಪಾಕಿಸ್ಥಾನಕ್ಕೆ ವಿಶ್ವಕಪ್ ಗೆದ್ದ ಇಮ್ರಾನ್ ಖಾನ್ ಹೆಸರು ಕೂಡ ಇಲ್ಲ.
40 ವರ್ಷದ ಪಾಕಿಸ್ಥಾನ ಮಾಜಿ ನಾಯಕನ ವಿಶ್ವಕಪ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಎಂದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಅಫ್ರಿದಿಯ ತಂಡದಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಆರಂಭಿಕರಾಗಿ ಸಹೀದ್ ಅನ್ವರ್ ಮತ್ತು ಆಸೀಸ್ ನ ಆ್ಯಡಂ ಗಿಲ್ ಕ್ರಿಸ್ಟ್ ಕಣಕ್ಕೆ ಇಳಿಯಲಿದ್ದಾರೆ. ಮೂರನೇ ಆಸೀಸ್ ನ ರಿಕಿ ಪಾಂಟಿಂಗ್, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಐದನೇ ಕ್ರಮಾಂಕದಲ್ಲಿ ಪಾಕಿಸ್ಥಾನದ ಇಂಝಮಾಮ್ ಉಲ್ ಹಕ್ ಆಡಲಿದ್ದಾರೆ.
ಆಲ್ ರೌಂಡರ್ ಆಗಿ ದಕ್ಷಿಣ ಆಫ್ರಿಕಾದ ಜ್ಯಾಕ್ ಕ್ಯಾಲಿಸ್ ಆಯ್ಕೆಯಾಗಿದ್ದಾರೆ. ಬೌಲಿಂಗ್ ದಾಳಿಗೆ ಅಫ್ರಿದಿ ಪಾಕಿಸ್ಥಾನ- ಆಸೀಸ್ ನ ಬೌಲರ್ ಗಳನ್ನು ಬಳಸಿದ್ದಾರೆ. ವೇಗಿಗಳಾಗಿ ವಾಸೀಂ ಅಕ್ರಮ್, ಗ್ಲೆನ್ ಮೆಗ್ರಾತ್, ಮತ್ತು ಶೋಯೆಬ್ ಅಖ್ತರ್ ಆಯ್ಕಾಯಾಗಿದ್ದಾರೆ. ಸ್ಪಿನ್ನರ್ ಗಳಾಗಿ ಶೇನ್ ವಾರ್ನ್ ಮತ್ತು ಸಕ್ಲೇನ್ ಮುಷ್ತಾಕ್ ಅಫ್ರಿದಿ ತಂಡದಲ್ಲಿರಲಿದ್ದಾರೆ.
ಅಫ್ರಿದಿ ತಂಡ: ಸಯೀದ್ ಅನ್ವರ್. ಆ್ಯಡಮ್ ಗಿಲ್’ಕ್ರಿಸ್ಟ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ, ಇಂಝಮಾಮ್ ಉಲ್ ಹಕ್, ಜ್ಯಾಕ್ ಕ್ಯಾಲಿಸ್, ವಾಸಿಂ ಅಕ್ರಮ್, ಗ್ಲೆನ್ ಮೆಗ್ರಾತ್, ಶೇನ್ ವಾರ್ನ್, ಶೋಯೆಬ್ ಅಖ್ತರ್, ಸಕ್ಲೇನ್ ಮುಷ್ತಾಕ್