Advertisement

ಎನ್ ಕೌಂಟರ್ ಗೆ ಮೂವರು ಮಹಿಳೆಯರು ಸೇರಿ ಏಳು ನಕ್ಸಲರ ಬಲಿ

09:13 AM Aug 04, 2019 | keerthan |

ಛತ್ತೀಸ್ ಗಢ: ಇಲ್ಲಿನ ರಾಜನಂದಗಾಂವ್ ನ ಸೀತಾಗೋಟಾ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ಯೋಧರು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ ಮೂವರು ಮಹಿಳೆಯರು ಸೇರಿ ಕನಿಷ್ಠ ಏಳು ನಕ್ಸಲರು ಹತರಾಗಿದ್ದಾರೆ. ನಕ್ಸಲರು ಕೂಡ ಪ್ರತಿದಾಳಿ ನಡೆಸಿದ್ದು, ರಕ್ಷಣಾ ಪಡೆಯ ಮೂವರು ಗಾಯಗೊಂಡಿದ್ದಾರೆ.

Advertisement

ಸ್ಥಳದಲ್ಲಿ 40ಕ್ಕೂ ಹೆಚ್ಚಿನ ನಕ್ಸಲರು ಅವಿತಿದ್ದ ಮಾಹಿತಿಯನ್ನು ಆಧರಿಸಿ ಎನ್ ಕೌಂಟರ್ ನಡೆಸಿದ್ದು, ನಕ್ಸಲರ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಸ್ಥಳದಲ್ಲಿ ಎಕೆ 47, 303 ರೈಫಲ್ ಸೇರಿದಂತೆ ಸಾಕಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆ ಇನ್ನು ಕೂಡಾ ಮುಂದುವರಿದಿದ್ದು, ಪ್ರದೇಶವನ್ನು ವಶಪಡಿಸಿಕೊಂಡಿರುವ ಜಿಲ್ಲಾ ಮೀಸಲು ಪಡೆ ಯೋಧರು, ಸಾರ್ವಜನಿಕರಿಗೆ ಪ್ರವೇಶ ನಿರ್ಭಂಧಿಸಿದ್ದಾರೆ.

ಬಗ್ನಾಡಿ ಪೊಲೀಸದ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ, ಜಿಲ್ಲಾ ಮೀಸಲು ಪಡೆ ನಕ್ಸಲರ ಹೊಡೆದುರಿಸುವಲ್ಲಿ ಸಫಲರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next