Advertisement

ಭಾರತದೆದುರು ಸರಣಿ; ವೆಸ್ಟ್‌ ಇಂಡೀಸ್‌ ತಂಡದ ಮೇಲೆ ನಂಬಿಕೆ ಇದೆ: ಲಾರಾ

11:14 PM Jul 10, 2023 | Team Udayavani |

ರೊಸೇಯೂ (ಡೊಮಿನಿಕಾ): ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್‌ ಪಂದ್ಯಾವಳಿಗೆ ಅರ್ಹತೆ ಸಂಪಾದಿಸದ ಆಘಾತದಲ್ಲಿರುವ ವೆಸ್ಟ್‌ ಇಂಡೀಸ್‌, ಇದೇ ಹೊತ್ತಿಗೆ ಸರಿಯಾಗಿ ಪ್ರವಾಸಿ ಭಾರತದೆದುರಿನ ಮಹತ್ವದ ಸರಣಿಗೆ ಸಜ್ಜಾಗುತ್ತಿದೆ. ಬುಧವಾರ ಇಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದ್ದು, ಮೆಂಟರ್‌ ಬ್ರಿಯಾನ್‌ ಲಾರಾ ತಂಡದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ನಮ್ಮ ತಂಡ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಇದೊಂದು ಯುವ ಪಡೆ. ಕ್ರೆಗ್‌ ಬ್ರಾತ್‌ವೇಟ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೆಸ್ಟ್‌ ಆಡುವ ಅರ್ಹತೆಯುಳ್ಳ ಬಹಳಷ್ಟು ಮಂದಿಯನ್ನು ನಾವು ಹೊಂದಿದ್ದೇವೆ. ಭಾರತ ಒಂದು ಕಠಿನ ಎದುರಾಳಿ. ನೂತನ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತವನ್ನು ಧನಾತ್ಮಕವಾಗಿ ಆರಂಭಿಸಬೇಕಿದೆ’ ಎಂಬುದಾಗಿ ಬ್ರಿಯಾನ್‌ ಲಾರಾ ಹೇಳಿದರು.

ವೆಸ್ಟ್‌ ಇಂಡೀಸ್‌ ದ್ವಿತೀಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಆವೃತ್ತದಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿ 8ನೇ ಸ್ಥಾನಕ್ಕೆ ಕುಸಿದಿತ್ತು. 4 ಟೆಸ್ಟ್‌ಗಳನ್ನು ಗೆದ್ದು, ಏಳರಲ್ಲಿ ಸೋಲನುಭವಿಸಿತ್ತು. 53 ವರ್ಷದ ಬ್ರಿಯಾನ್‌ ಲಾರಾ ಕಳೆದ ಐಪಿಎಲ್‌ ವೇಳೆ ಸನ್‌ರೈಸರ್ ತಂಡದ ಪ್ರಧಾನ ಕೋಚ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next