Advertisement
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೆರೆನಾ-ಅಲೆಕ್ಸಿಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ದಿನಾಂಕವನ್ನು ಪ್ರಕಟಿಸಿರಲಿಲ್ಲ. ಆ ಬಳಿಕ ಸೆರೆನಾ ಗರ್ಭಿಣಿಯಾದರು. ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಹು ದಿನದ ಬಳಿಕ ಇವರಿಬ್ಬರು ಮದುವೆಯಾಗುವ ಮನಸ್ಸು ಮಾಡಿದ್ದಾರೆ. ಮದುವೆ ಸ್ಥಳವನ್ನು ಕಳೆದ ಕೆಲವು ತಿಂಗಳಿನಿಂದ ಹುಡುಕುತ್ತಿದ್ದರು. ಕೊನೆಗೆ ಲೂಯಿಸಿಯಾನದ ನ್ಯೂ ಅರ್ಲಿಯನ್ಸ್‌ನಲ್ಲಿ ಮದುವೆ ನಡೆಸಲು ಇಬ್ಬರು ನಿಶ್ಚಿಯಿಸಿದ್ದಾರೆ. ಅಂತೆಯೆ ಅಲ್ಲಿನ ಕಾಂಟೆಂಪರರಿ ಆರ್ಟ್ಸ್ ಸೆಂಟರ್‌ನಲ್ಲಿ ಮದುವೆ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಕೆಲವರಿಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಇಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಮದುವೆಗೆ ಬರೋಬ್ಬರಿ 6 ಕೋಟಿ ರೂ. ಖುರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ. ಕುಟುಂಬ ಮೂಲಗಳು, ಗಣ್ಯರು, ಮಾಜಿ ಹಾಲಿ ಟೆನಿಸ್ ಪಟುಗಳು, ಉದ್ಯಮಿಗಳು ಆಗಮಿಸಲಿದ್ದಾರೆ ಎನ್ನಲಾಗಿದೆ. Advertisement
ಇಂದು ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ಮದುವೆ
06:05 AM Nov 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.