Advertisement

ಎತ್ತಿನಗಾಡಿಯಲ್ಲಿ ಬಂದ ದಿಬ್ಬಣ!

07:19 PM Apr 13, 2020 | Karthik A |

ಉಡುಪಿ: ನಾಲ್ಕೈದು ದಶಕಗಳ ಹಿಂದೆ ಮದುವೆ ದಿಬ್ಬಣ ಎತ್ತಿನ ಗಾಡಿಯಲ್ಲಿ ಬರುತ್ತಿತ್ತು. ಈ ಕಾಲದಲ್ಲಿ ಇದನ್ನು ನಿರೀಕ್ಷಿಸುವುದು ಕಷ್ಟ. ಆದರೂ ಅಪರೂಪದ ಇಂತಹ ದಿಬ್ಬಣ ಇಂದ್ರಾಳಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆದ ಮದುವೆಯಲ್ಲಿ ಕಂಡು ಬಂತು.

Advertisement


ಯಕ್ಷಗಾನದ ಉಭಯತಿಟ್ಟುಗಳ ವಿಶಾರದ ಭಾಗವತ ನಾರಾಯಣ ಶಬರಾಯ ಮತ್ತು ರಾಜಶ್ರೀ ಅವರ ಪುತ್ರಿ, ಸಂಗೀತ ವಿಶಾರದೆ ಗಾರ್ಗಿ ಅವರ ವಿವಾಹದಲ್ಲಿ ಗಾರ್ಗಿಯವರು ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ದಿಬ್ಬಣದೊಂದಿಗೆ ಬಂದದ್ದು ನೆರೆದವರನ್ನು ಚಕಿತಗೊಳಿಸಿ ದಶಕಗಳಷ್ಟು ಹಿಂದಿನ ಕಾಲಕ್ಕೆ ಮನಃಪಟಲವನ್ನು ಚಲಿಸುವಂತೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next