Advertisement
ಪಾಲಿಕೆಯ ಸ್ಮಾರ್ಟ್‌ಸಿಟಿ ಕಮಾಂಡ್ ಕಂಟ್ರೋಲ್ ರೂಂ ಪಕ್ಕದಲ್ಲಿಯೇ ಕೋವಿಡ್ ವಾರ್ ರೂಂ ತೆರೆಯಲಾಗಿದೆ. ಮಂಗಳೂರಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಯಾರೆಲ್ಲ ಮೊದಲ ಡೋಸ್ ಲಸಿಕೆ ಪಡೆಯಲಿಲ್ಲ, ಎರಡನೇ ಡೋಸ್ ಲಸಿಕೆಗೆ ಬಾಕಿ ಇರುವವರ ಮಾಹಿತಿಯನ್ನು ತೆಗೆದುಕೊಂಡು ಅಂತಹವರಿಗೆ ವಾರ್ ರೂಂನಿಂದ ಕರೆ ಮಾಡಲಾಗುತ್ತದೆ. ಲಸಿಕೆ ಪಡೆದುಕೊಳ್ಳದಿರಲು ಸಮರ್ಪಕ ಕಾರಣ ಪಡೆದು, ಲಸಿಕೆ ಪಡೆಯಲು ಏನು ಮಾಡಬೇಕು ಎಂಬ ಮಾಹಿತಿ ನೀಡಲಾಗುತ್ತದೆ. ಲಸಿಕೆ ಪಡೆಯಲು ಇಷ್ಟ ಇಲ್ಲ ಎಂಬವರಿಗೆ ಕೌನ್ಸಿಲಿಂಗ್ ಮಾಡಲಾಗುತ್ತದೆ.
Related Articles
Advertisement
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಜತೆ ಜಿಲ್ಲೆಯ ವಿವಿಧ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೂಡ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ.
ಜಿಲ್ಲೆಗೆ ಸಮರ್ಪಕವಾಗಿ ಲಸಿಕೆ ಸರಬ ರಾಜು ಆಗುತ್ತಿದ್ದರೂ ಇನ್ನೂ ಸುಮಾರು ಶೇ. 10ರಷ್ಟು ಮಂದಿ ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಅವರು ಲಸಿಕೆ ಪಡೆದುಕೊಳ್ಳಲು ಪ್ರೇರೇಪಿಸಲು, ಅವರ ಮನೆಗೆ ಲಸಿಕ ಮಿತ್ರರನ್ನು ಕಳುಹಿಸಿಕೊಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದಕ್ಕೆಂದು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಅಲ್ಲಿನ ಹತ್ತಿರದ ಎನ್ನೆಸ್ಸೆಸ್ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ವಸತಿ ಸಮುಚ್ಚಯಗಳಿಗೆ ಪ್ರತ್ಯೇಕ ಫಾರ್ಮೆಟ್ಜಿಲ್ಲೆಯ ಕಾಲೇಜು, ವಸತಿ ಸಮು ಚ್ಚಯ ಅಸೋಸಿಯೇಶನ್‌ಗೆ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ನಮೂನೆ ನೀಡಲಾಗುತ್ತದೆ. ಎಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ, ಎಷ್ಟು ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಾರೆ ಎಂಬ ಬಗ್ಗೆ ಮಾಹಿತಿ ಭರ್ತಿ ಮಾಡಿ ನೀಡಬೇಕು. ಲಸಿಕೆ ಪಡೆಯಲು ಬಾಕಿ ಇದ್ದರೆ ಅಲ್ಲಿಗೆ ಆರೋಗ್ಯ ಇಲಾಖೆ ತಂಡ ಆಗಮಿಸಿ ಲಸಿಕೆ ನೀಡಲಿದೆ. ಇನ್ನು, ಈ ಕುರಿತಂತೆ ಜಿಲ್ಲೆಯ ಪ್ರಮುಖ ಸೆಲೆಬ್ರಿಟಿ ಗಳಿಂದಲೂ ಅಭಿಯಾನ ನಡೆಸಲು ಆರೋಗ್ಯ ಇಲಾಖೆ ಪೂರಕ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಾಗೃತಿಯಿಂದ ಪ್ರಗತಿ ಸಾಧ್ಯ
ಪ್ರತಿಯೊಬ್ಬರೂ ಲಸಿಕೆ ಪಡೆದುಕೊಳ್ಳಬೇಕು ಎಂಬ ಉದ್ದೇಶ ದಿಂದ ಜಾಗೃತಿ ಮೂಡಿಸಲು ಲಸಿಕ ಮಿತ್ರರು ಎಂಬ ಅಭಿಯಾನ ಆರಂಭಿಸಲಿದ್ದೇವೆ. ಜಾಗೃತಿಯಿಂದ ಮಾತ್ರವೇ ಲಸಿಕೆ ನೀಡಿಕೆಯಲ್ಲಿ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಲಸಿಕಾ ಮಿತ್ರರು ಸಾರ್ವಜನಿಕರಿಗೆ ಕರೆ ಮಾಡಿದಾಗ ಸಮರ್ಪಕ ಉತ್ತರ ನೀಡಿ ಸಹಕಾರ ನೀಡಬೇಕಿದೆ. ಒಂದು ವೇಳೆ ಲಸಿಕೆ ಪಡೆದುಕೊಂಡಿದ್ದರೆ ಅವರು ಐಡಿ ಹೇಳಬೇಕು.
-ಡಾ| ಕಿಶೋರ್ ಕುಮಾರ್, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ