Advertisement

Mudbidri: ಕಲ್ಲಮುಂಡ್ಕೂರು-ಕುಂಟಲಪಲ್ಕೆ ಎಸ್‌ಟಿ ಕಾಲನಿ ರಸ್ತೆ ಜಲ್ಲಿಕಲ್ಲು!

03:03 PM Dec 28, 2024 | Team Udayavani |

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ, ಪೇಟೆಯ ಸನಿಹದಲ್ಲೇ ಇರುವ ಕುಂಟಲಪಲ್ಕೆಯ ಎಸ್‌ಟಿ ಕಾಲನಿ ರಸ್ತೆಯಲ್ಲಿ ಸುಮಾರು ಮುಕ್ಕಾಲು ಕಿ.ಮೀ. ಉದ್ದದಷ್ಟು ಭಾಗ ತೀರಾ ನಾದುರಸ್ತಿಯಲ್ಲಿದೆ.

Advertisement

ಇಳಿಜಾರು, ತಿರುವುಗಳಿರುವ ಈ ರಸ್ತೆಗೆ ಹಾಕಲಾಗಿದ್ದ ಡಾಮರು ಕಿತ್ತು ಹೋಗಿ ಎರಡು ವರ್ಷಗಳೇ ಕಳೆದಿವೆ. ಮಾರ್ಗದಲ್ಲಿ ಜಲ್ಲಿಕಲ್ಲುಗಳೆಲ್ಲ ಹರಡಿಕೊಂಡಿವೆ. ಆಟೋರಿಕ್ಷಾ, ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಹರಸಾಹಸ ಪಡಬೇಕಾಗಿದೆ. ಇಲ್ಲಿರುವ ಮನೆಗಳಲ್ಲಿ ವೃದ್ಧರಿದ್ದಾರೆ. ಅವರು ಕಾಯಿಲೆ ಬಿದ್ದರೆ ಅವರನ್ನು ಕನಿಷ್ಟ ಆಟೋರಿಕ್ಷಾದಲ್ಲಾದರೂ ವೈದ್ಯರಲ್ಲಿಗೆ, ಆಸ್ಪತ್ರೆಗೆ ಸಾಗಿಸೋಣವೆಂದರೆ ಬಹಳ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಸಂತೋಷ್‌. ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಕಷ್ಟ. ಕೃಷಿಕರು ತಮ್ಮ ಉತ್ಪನ್ನಗಳನ್ನು ಹೊರಗೆ ಸಾಗಿಸಲು, ಕೃಷಿಗೆ ಬೇಕಾದ ಸಾಮಗ್ರಿಗಳನ್ನು ತರಲು ಕಷ್ಟ ಪಡುವಂತಾಗಿದೆ.

ಇಳಿಜಾರು, ತಿರುವುಗಳಿಂದ ಕೂಡಿದ ಈ ರಸ್ತೆಯನ್ನು ಬಳಕೆ ಯೋಗ್ಯವನ್ನಾಗಿಸಲು ಕಾಂಕ್ರೀಟ್‌ ಹೊದೆಸುವುದೇ ಸೂಕ್ತ. ಆದರೆ, ಸುಮಾರು 15 ಲಕ್ಷ ರೂ. ವೆಚ್ಚದ ಈ ಕಾಮಗಾರಿ ನಡೆಸಲು ಪಂಚಾಯತ್‌ ಸಶಕ್ತವಾಗಿಲ್ಲ ಎನ್ನಲಾಗುತ್ತಿದೆ.

ಸರಕಾರ ಎಸ್‌ಸಿ ಎಸ್‌ಟಿ ನಿಧಿ ಬಿಡುಗಡೆ ಮಾಡದೆ ಸಮಸ್ಯೆಯಾಗಿದೆ. ಪಂಚಾಯತ್‌ ಆರೋಗ್ಯ ಮತ್ತಿತರ ವಿಷಯಗಳಿಗಷ್ಟೇ ತನ್ನಲ್ಲಿರುವ ಈ ನಿಧಿಯನ್ನು ಬಳಸಬಹುದಷ್ಟೇ, ಮಾರ್ಗ ರಚನೆಗಲ್ಲ. ಹಾಗಾಗಿ ಸಮಸ್ಯೆಯಾಗಿದೆ ಎನ್ನುತ್ತಾರೆ ಪಂಚಾಯತ್‌ ಮಾಜಿ ಅಧ್ಯಕ್ಷ ಕೇಶವ ಪೂಜಾರಿ.

ತಮ್ಮ ಊರಿಗೆ ಅಗತ್ಯ ಬೇಕಾಗಿರುವ ಈ ರಸ್ತೆಗೆ ಕಾಯಕಲ್ಪ ನೀಡಬೇಕೆಂದು ಸ್ಥಳೀಯರು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಎಸ್‌ಟಿ ನಿಧಿ ಅಥವಾ ಇತರ ಅನುದಾನದಿಂದ ಕುಂಟಲಪಲ್ಕೆ ಎಸ್‌ಟಿ ಕಾಲನಿ ರಸ್ತೆಗೆ ಕಾಂಕ್ರೀಟ್‌ ಹೊದೆಸುವುದು ಅಗತ್ಯವಾಗಿದೆ.

Advertisement

ಸರಕಾರದಿಂದ ಎಸ್‌ಸಿಎಸ್‌ಟಿ ನಿಧಿ ಬರುವ ನಿರೀಕ್ಷೆಯಲ್ಲಿದ್ದೇವೆ. ಅದು ಬಂದ ತತ್‌ಕ್ಷಣ ಇಂಥ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗಲಿದೆ.
-ಪ್ರಶಾಂತ್‌ ಶೆಟ್ಟಿ, ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next