Advertisement

‘ಕರಾವಳಿಗೆ ಪ್ರತ್ಯೇಕ ಮರಳು ನೀತಿ ಅನಿವಾರ್ಯ’

09:29 AM Mar 06, 2019 | Team Udayavani |

ಬೆಳ್ತಂಗಡಿ : ಕರಾವಳಿ ಜಿಲ್ಲೆಗಳಲ್ಲಿ ಮರಳು ಅಭಾವದಿಂದ ಕಾಮಗಾರಿಗಳ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ. ಆದ್ದರಿಂದ ಸರಕಾರ ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸುವುದು ಅಗತ್ಯ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ ಕಚೇರಿ ಸಭಾಭವನದಲ್ಲಿ ಜರಗಿದ ಟ್ರಸ್ಟ್‌ನ ಸಮಾವೇಶದಲ್ಲಿ ಮಂಡಿಸಿದ್ದ 22 ನಿರ್ಣಯ (ಹಕ್ಕೊತ್ತಾಯ)ಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ಕೇಂದ್ರಕ್ಕೆ ಸಂಬಂಧಪಟ್ಟ ಹಲವು ವಿಷಯಗಳ ಬಗ್ಗೆ ಈಗಾಗಲೇ ಸ್ಪಂದಿಸಿದ್ದೇವೆ, ಹೋರಾಟವನ್ನೂ ಮಾಡಿದ್ದೇವೆ. ಪಕ್ಷದ ಪ್ರಣಾಳಿಕೆಯಲ್ಲಿ ಹಿರಿಯರೊಂದಿಗೆ ಮಾತುಕತೆ ಮಾಡಿ ಸೇರಿಸುತ್ತೇವೆ ಎಂದರು. ಯುವಜನರಿಗೆ, ಮಹಿಳೆಯರಿಗೆ, ಎಸ್‌ಸಿ, ಎಸ್‌ಟಿಗಳಿಗೆ ಉದ್ಯೋಗ ಒದಗಿಸಲು ಉದ್ಯಮಶೀಲತೆ ಬೆಳೆಸಿ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ಥಿತಿಗತಿ ಕುರಿತು ಟ್ರಸ್ಟ್‌ನ ಅಧ್ಯಯನ ವರದಿ ಪರಿಶೀಲಿಸಿ ವಿಶೇಷ ಗಮನ ಹರಿಸುವುದಾಗಿ ಅವರು ತಿಳಿಸಿದರು.

ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ಟ್ರಸ್ಟ್‌ನ ಜನರ ಪ್ರಣಾಳಿಕೆ, ಮುಖಾಮುಖೀ ಕಾರ್ಯಾಚರಣೆಗಳ ವಿವರ ನೀಡಿದರು. ಕಾರ್ಯದರ್ಶಿ ಜಯಪ್ರಕಾಶ್‌ ಭಟ್‌ ಸಿ.ಎಚ್‌. ಸ್ವಾಗತಿಸಿ, ಸಹಕಾರ್ಯದರ್ಶಿ ನಾರಾಯಣ ಕಿಲಂಗೋಡಿ ವಂದಿಸಿದರು. ಉಪಾಧ್ಯಕ್ಷ ಕೆ. ರಮಾನಂದ ಸಾಲ್ಯಾನ್‌ ಮತ್ತು ಸಹಕಾರ್ಯದರ್ಶಿ ವನಿತಾ ಜೈನ್‌ ಉಪಸ್ಥಿತರಿದ್ದರು. ಟ್ರಸ್ಟಿಗಳು ಮತ್ತು ತುಳುವೆರೆ ಪರ್ಬದ ಸಂಚಾಲಕರು ಭಾಗವಹಿಸಿದ್ದರು.

ನಿರ್ಣಯಗಳಿಗೆ ಸಹಮತ
ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು 3 ಬಾರಿ ನಿಯೋಗದೊಂದಿಗೆ ಪ್ರಯತ್ನ ಮಾಡಿದ್ದೇನೆ. ಇದನ್ನು ಗಂಭೀರವಾಗಿ ಮುಂದುವರಿಸುತ್ತೇನೆ. ಕಲಾಕಾರರಿಗೆ ಪಿಂಚಣಿ ಮತ್ತಿತರ ನಿರ್ಣಯಗಳಿಗೆ ನನ್ನ ಸಹಮತ ಇದೆ.
– ನಳಿನ್‌ ಕುಮಾರ್‌ ಕಟೀಲು
   ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next