Advertisement
ಒಂದು ತಂಡದಿಂದ ಬಡಗಬೆಳ್ಳೂರು ತಾರಿಪಡ್ಪು ನಿವಾಸಿ ತೇಜಾಕ್ಷ ದೂರು ನೀಡಿದ್ದಾರೆ. ಡಿ. 29ರಂದು ಮಧ್ಯಾಹ್ನ 2.30ರ ಸುಮಾರಿಗೆ ಬಡಗಬೆಳ್ಳೂರಿನಿಂದ ಮನೆಗೆ ಹೋಗುತ್ತಿದ್ದು, ಕೊಳತ್ತಮಜಲಿಗೆ ತಲುಪಿದಾಗ ಪರಿಚಯದ ಉಮೇಶ ಎಂಬವರಿಗೆ ಕೆಲವರು ಹೊಡೆಯುತ್ತಿರುವುದು ಕಂಡುಬಂದಿದೆ. ಈ ವೇಳೆ ತೇಜಾಕ್ಷ “ಯಾಕೆ ಹೊಡೆಯುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದು, ಆಗ ಆರೋಪಿಗಳಾದ ಮುಸ್ತಾ, ನವಾಜ್, ರಜಿಂ ಹಾಗೂ ಇತರರು ತೇಜಾಕ್ಷರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಜತೆಗೆ ಸುಲೈಮಾನ್ ಎಂಬಾತನು ಕೂಡ ಸ್ಥಳಕ್ಕೆ ಬಂದು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಮತ್ತೂಂದು ತಂಡದಿಂದ ಕರಿಯಂಗಳ ಗ್ರಾಮದ ಪಲ್ಲಿಪಾಡಿ ನಿವಾಸಿ ಸುಲೈಮಾನ್ ದೂರು ನೀಡಿದ್ದಾರೆ. ಡಿ. 29ರಂದು ಮಧ್ಯಾಹ್ನ 1.15ರ ಸುಮಾರಿಗೆ ಮದುವೆಗೆ ಹೋಗಲು ಕೊಳತ್ತಮಜಲಿನಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಉಮೇಶನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಾಲರ್ ಪಟ್ಟಿ ಹಿಡಿದು ಎಳೆದು ಹಾಕಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ತೇಜಾಕ್ಷ ಕೂಡ ಬಂದು “ಗಲಾಟೆ ಮಾಡುತ್ತೀಯಾ’ ಎಂದು ಕೊಲೆ ಬೆದರಿಕೆ ಒಡ್ಡಿದ್ದಾನೆ. ಉಮೇಶನು ಹಣಕಾಸಿನ ದ್ವೇಷದಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.