ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ 370 ಕ್ಕೂ ಅಧಿಕ ಅಂಕಗಳ ಓಲಾಟವನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 10.25 ಅಂಕಗಳ ಅಲ್ಪ ಏರಿಕೆಯೊಂದಿಗೆ 38,730.82 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 2.70 ಅಂಕಗಳ ಇಳಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,555.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್ ಎನಿಸಿಕೊಂಡ ಬಜಾಜ್ ಫಿನಾನ್ಸ್, ಸನ್ ಫಾರ್ಮಾ, ಹೀರೋ ಮೋಟೋ ಕಾರ್ಪ್, ಎಲ್ ಆ್ಯಂಡ್ ಟಿ, ಆರ್‌ಐಎಲ್, ಭಾರ್ತಿ ಏರ್‌ಟೆಲ್ ಶೇರುಗಳು ಶೇ.5.60 ಏರಿಕೆಯನ್ನು ದಾಖಲಿಸಿದವು.
ಟಾಪ್ ಲೂಸರ್ ಎನಿಸಿಕೊಂಡ ಟಿಸಿಎಸ್ ಇಂದು ಶೇ.2.05ರ ಇಳಿಕೆಯನ್ನು ದಾಖಲಿಸಿತು. ಉಳಿದಂತೆ ಎಸ್ ಬ್ಯಾಂಕ್, ಐಟಿಸಿ, ಎಚ್‌ಸಿಎಲ್ ಟೆಕ್, ಮಾರುತಿ, ಏಶ್ಯನ್ ಪೇಂಟ್, ಅವಳಿ ಎಚ್ ಡಿ ಎಫ್ ಸಿ, ಕೋಟಕ್ ಬ್ಯಾಂಕ್ ಶೇರುಗಳು ಶೇ.1.88ರ ಪ್ರಮಾಣದಲ್ಲಿ ಕುಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,602 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,172 1,172 ಶೇರುಗಳು ಮುನ್ನಡೆ ಸಾಧಿಸಿದವು; 1,270 ಶೇರುಗಳು ಹಿನ್ನಡೆಗೆ ಗುರಿಯಾದವು; 160 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.