Advertisement
ಇದು ಸಹಸ್ರ ಹಿಂದೂಗಳು ಹಲವು ದಶಕಗಳಿಂದ ಕಾತುರದಿಂದ ಕಾಯುತ್ತಿದ್ದ ಸಂದರ್ಭವಾಗಿದೆ. ಈ ಪುಣ್ಯ ಭೂಮಿಯಾಗಿ ಹೋರಾಡಿದ ಅನೇಕರು ನಿಟ್ಟುಸಿರು ಬಿಡುವ ದಿನವೂ ಹೌದು.
Related Articles
Advertisement
ಈ ಹಿರಿಯ ಜೀವ ತನ್ನ ಜೀವನದ ಬಹುಪಾಲು ಅವಧಿಯನ್ನು ಕೇವಲ ಕೋರ್ಟ್ ಕಲಾಪಗಳಿಗೆ ಮೀಸಲಿರಿಸಿದ್ದರು. ಇನ್ನೂ ವಿಶೇಷವೆಂದರೆ ಅವರು ತಮ್ಮ ಈ ಇಳಿವಯಸ್ಸಿನಲ್ಲೂ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದಿಸಿದ್ದರು.
ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಸುದೀರ್ಘ ವಿಚಾರಣೆಗೊಳಗಾದ ಪ್ರಕರಣಗಳಲ್ಲಿ ಒಂದು ಎಂದೇ ಗುರುತಿಸಿಕೊಳ್ಳುತ್ತಿರುವ ರಾಮ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಶ್ರೀರಾಮಚಂದ್ರನ ವಿಚಾರದಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದ ಕಾರಣಕ್ಕಾಗಿಯೇ ಪರಾಶರನ್ ಅವರು ತಮ್ಮ ಯುವ ವಕೀಲರ ತಂಡದ ಸಹಾಯದೊಂದಿಗೆ ಈ ಪ್ರಕರಣದಲ್ಲಿ ವಾದಿಸಿ ತಮ್ಮ ಕಕ್ಷಿದಾರರಿಗೆ ಗೆಲುವನ್ನು ತಂದಿಟ್ಟಿದ್ದರು. ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ಎದುರು ಸತತ 40 ದಿನಗಳ ಕಾಲ ನಡೆದ ಈ ವಾದ ಸರಣಿಯ ಸಂದರ್ಭದಲ್ಲಿ ನ್ಯಾಯವಾದಿ ಪರಾಶರನ್ ಅವರು ಈ ಪ್ರಕರಣದ ಪ್ರತೀ ಅಂಶಗಳ ಕುರಿತಾಗಿಯೂ ನ್ಯಾಯಪೀಠದ ಗಮನ ಸೆಳೆಯುತ್ತಿದ್ದರು. ಪ್ರತೀದಿನ 10.30ಕ್ಕೆ ಪ್ರಾರಂಭವಾಗುತ್ತಿದ್ದ ಕೋರ್ಟ್ ಕಲಾಪ ಸಾಯಂಕಾಲ 4 ಅಥವಾ 5 ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು.
ಪಿ.ವಿ. ಯೋಗೇಶ್ವರನ್, ಅನಿರುದ್ ಶರ್ಮಾ, ಶ್ರೀಧರ್ ಪೊಟ್ಟರಾಜು ಮತ್ತು ಅದಿತಿ ದಾನಿ ಅವರಿದ್ದ ಯುವ ವಕೀಲ ಪಡೆ ಪರಾಶರನ್ ಅವರಿಗೆ ಸಹಾಯ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಈ ಹಿರಿಯ ನ್ಯಾಯವಾದಿಯ ನಾಲಗೆ ತುದಿಯಲ್ಲೇ ಇರುತ್ತಿದ್ದುದು ಅವರ ಕುಂದದ ಜ್ಞಾಪಕ ಶಕ್ತಿಗೊಂದು ಉತ್ತಮ ಉದಾಹರಣೆಯಾಗಿತ್ತು. ಮಾತ್ರವಲ್ಲದೇ ಇದು ನ್ಯಾಯಾಲಯದಲ್ಲಿ ಎಲ್ಲರ ಅಚ್ಚರಿಗೂ ಕಾರಣವಾಗುತ್ತಿತ್ತು.
ಪರಾಶರನ್ ಅವರಿಗೆ ಪ್ರತಿವಾದಿಯಾಗಿದ್ದವರು ಮುಸ್ಲಿಂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ರಾಜೀವ್ ಧವನ್ ಅವರು. ಧವನ್ ಅವರು ಉತ್ತಮ ಪ್ರತಿವಾದಿಯಾಗಿದ್ದರು. ಎದುರಾಲಿ ಕಕ್ಷಿದಾರರಿಗೆ ಪ್ರಖರ ಪ್ರಶ್ನೆಗಳನ್ನು ಕೇಳುವುದು, ಪಾಯಿಂಟ್‌ಗಳನ್ನು ಹಾಕುವುದರಲ್ಲಿ ಧವನ್ ಇಂದಿಗೂ ಸುಪ್ರೀಂ ಕೋರ್ಟ್‌ನಲ್ಲಿ ಹೆಸರುವಾಸಿ. ಆದರೆ ಇಳಿ ವಯಸ್ಸಿನ 40 ದಿನಗಳ ವಿಚಾರಣೆಯ ಸಂದರ್ಭದಲ್ಲಿ ಪರಾಶರನ್ ಅವರು ತಾಳ್ಮೆ ಕಳೆದುಕೊಳ್ಳದೇ ಇದ್ದು ಪ್ರತಿವಾದಗಳನ್ನು ಆಳಿಸುತ್ತಿದ್ದರು. ಕೆಲವು ಹಂತದಲ್ಲಂತೂ ಕೋಪಗೊಳ್ಳುತ್ತಿದ್ದ ರಾಜೀವ್ ಧವನ್ ಅವರು ಕೆಲವೊಂದು ಕಾಗದ ಪತ್ರಗಳನ್ನು ಹರಿದು ಹಾಕುತ್ತಿದ್ದರು. ಒಂದೆರೆಡು ಉದಾಹರಣೆಗಳಲ್ಲಿ ಹೇಳುವುದಾದರೆ ಹಿಂದೂ ಕಡೆಯ ವಕೀಲವರ ವಾದ ಮೂರ್ಖತನದ್ದಾಗಿದೆ ಎಂದು ಹೇಳಿದಾಗಲೂ ಪರಾಶರನ್ ಅವರು ಅದಕ್ಕೆ ಯಾವುದೇ ಎದುರುತ್ತರ ನೀಡದೇ ಶಾಂತ ಚಿತ್ತರಾಗುತ್ತಿದ್ದರು. ಇದು ಪರಾಶರನ್ ಅವರ ಹೆಚ್ಚುಗಾರಿಕೆ.