Advertisement

ಹಿರಿಯ ನಿರ್ಮಾಪಕಿ ಜಯಶ್ರೀದೇವಿ ನಿಧನ

09:42 AM Feb 14, 2019 | |

ಬೆಂಗಳೂರು: ಕನ್ನಡ ಮತ್ತು ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕಿ ಜಯಶ್ರೀದೇವಿ (60) ಹೃದಯಾಘಾತ ದಿಂದ, ಬುಧವಾರ ಬೆಳಗ್ಗೆ ಹೈದರಾ ಬಾದ್‌ನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

“ಭವಾನಿ’, “ನಮ್ಮೂರ ಮಂದಾರ ಹೂವೆ’, “ಅಮೃತ ವರ್ಷಿಣಿ’, “ಶ್ರೀ ಮಂಜುನಾಥ’, “ನಿಶ್ಯಬ್ಧ’, “ಹಬ್ಬ’, “ಸ್ನೇಹ ಲೋಕ’, “ವಂದೇ ಮಾತರಂ’ ಸೇರಿದಂತೆ ಕನ್ನಡ ಮತ್ತು ತೆಲುಗಿನಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಲ್ಟಿಸ್ಟಾರ್‌, ಬಿಗ್‌ ಬಜೆಟ್‌ ಚಿತ್ರಗಳನ್ನು ಜಯಶ್ರೀದೇವಿ ನಿರ್ಮಿಸಿದ್ದರು. 2016ರಲ್ಲಿ ತೆರೆಕಂಡಿದ್ದ ಸುದೀಪ್‌ ಮತ್ತು ಉಪೇಂದ್ರ ಅಭಿನಯದ “ಮುಕುಂದ ಮುರಾರಿ’ ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಆಗಿದ್ದ ಜಯಶ್ರೀದೇವಿ, ಇತ್ತೀಚೆಗೆ ಬಿಡುಗಡೆಯಾಗಿದ್ದ ತೆಲುಗಿನ ಸೂಪರ್‌ ಹಿಟ್‌ “ಎನ್‌ ಟಿಆರ್‌’ ಚಿತ್ರದ ವಿತರಣೆಯನ್ನೂ ಮಾಡಿದ್ದರು. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದ ನಿರ್ಮಾಣ ನಿರ್ವಹಣೆಯ ಹೊಣೆಯನ್ನೂ ವಹಿಸಿಕೊಂಡಿದ್ದರು.

ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು (ಗುರುವಾರ) ಮಧ್ಯಾಹ್ನ 12ರಿಂದ 3ರವರೆಗೆ ನಿರ್ಮಾಪಕರ ಸಂಘದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಸಂಜೆ ಹೆಬ್ಟಾಳದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಯಶ್ರೀದೇವಿ ಅವರ ಅಕಾಲಿಕ ನಿಧನಕ್ಕೆ ನಟ ಶಿವರಾಜಕುಮಾರ್‌ ಸೇರಿದಂತೆ ಕನ್ನಡ ಚಿತ್ರರಂಗದ ಕಲಾ ವಿದರು ನಿರ್ಮಾಪಕರು, ನಿರ್ದೇಶಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌. ಎ.ಚಿನ್ನೇಗೌಡ ಸೇರಿದಂತೆ, ತೆಲುಗು ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next