ಸೇಡಂ: ಜಿಹಾದಿ ಮನಸ್ಥಿತಿ ಯಾವಾಗ ಹುಟ್ಟಿಕೊಂಡಿತು. ಅಲ್ಲಿಯಿಂದ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಬೇಕಾದರೆ ಹಿಂದೂಗಳು ಜಾಗೃತರಾಗುವುದು ಬಹಳ ಅವಶ್ಯಕವಾಗಿದೆ ಎಂದು ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇತ್ತಿಚೆಗೆ ಸೇಡಂನಲ್ಲಿ ಹಿಂದೂ ಯುವಕರಿಗೆ ಅನ್ಯ ಕೋಮಿನ ಪುಂಡರ ಗುಂಪೊಂದು ನಡೆಸಿದ ಹಲ್ಲೆ ಪ್ರಕರಣ ಖಂಡಿಸಿ ಹಿಂದೂ ಸಮಾಜ ಕರೆ ನೀಡಿದ ಸೇಡಂ ಬಂದ್‍ನಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಹಿಂದೂಗಳ ಮೇಲೆನ ದೌರ್ಜನ್ಯ ಕೆವಲ ಬಾಂಗ್ಲಾದಲ್ಲಿ ಮಾತ್ರವಲ್ಲ ಪಾಕಿಸ್ತಾನ ಸೇರಿದಂತೆ ಇನ್ನಿತರ ಮುಸ್ಲಂ ದೇಶಗಳಲ್ಲಿ ನಡೆಯುತ್ತಲೇ ಇದೆ. ನಾವು ಹಿಂದೂ ಮುಸ್ಲಿಂ ಬಾಯಿ-ಬಾಯಿ ಸೌಹಾರ್ದತೆಯಿಂದ ಇದ್ದರೆ. ಪಾಕ್ ಮತ್ತು ಬಾಂಗ್ಲಾ ದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು. ಅಲ್ಲಿನ ಮಠ, ಮಂದಿರಗಳನ್ನು ಧ್ವಂಸಗೊಳಿಸುವ ಕೆಲಸ ಮಾಡಲಾಗುತ್ತಿದೆ. ಹಿಂದೂ ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗುತ್ತಿದೆ. ಅಂತಹ ದೇಶದ ಮಾಜಿ ಪ್ರಧಾನಿಯನ್ನು ಅಲ್ಲಿನ ಜನ ಓಡಿಸಿದರೆ ಅವರಿಗೆ ಆಶ್ರಯ ನೀಡುವ ಕೆಲಸ ಇಂದು ಭಾರತ ಮಾಡಿದೆ. ಬಾಂಗ್ಲಾ ದೇಶದಲ್ಲಿನ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಮೋದಿ ಅಲ್ಲಿನ ಆಡಳಿತಕ್ಕೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಜುಡುವಾ ಮಂತ್ರಿಗಳ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಒಂದರ ಮೇಲೊಂದರಂತೆ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಆದರೂ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಜುಡುವಾ ಮಂತ್ರಿಗಳು ನಡೆದುಕೊಳ್ಳುತ್ತಿದ್ದಾರೆ. ಇಂತಹ ಮಂತ್ರಿಗಳನ್ನು ಮನೆಗೆ ಕಳುಹಿಸುವ ಕೆಲಸ ಮುಂದಿನ ದಿನಗಳಲ್ಲಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ|ಶರಣಪ್ರಕಾಶ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಹೋರಾಟದ ನೇತೃತ್ವ ವಹಸಿದ್ದ ಆರ್‍ಎಸ್‍ಎಸ್ ಮುಖಂಡ ರಾಜಶೇಖರ ನೀಲಂಗಿ ಮಾತನಾಡಿ, ಜಗತ್ತಿನ ಯಾವುದೇ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದರೆ ಅದನ್ನು ನಾವು ಖಂಡಿಸುವ ಕೆಲಸ ಮಾಡಬೇಕು. ಜೊತೆಗೆ ಸೇಡಂನಲ್ಲಿ ಇತ್ತೀಚೆಗೆ ಅನ್ಯ ಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದ್ದು, ಕೃತ್ಯದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಅವರ ಮೇಲೆ ಗೂಂಡಾ ಕಾಯ್ದೆಯಡಿ ಶಿಕ್ಷೆ ನೀಡಿ ಅವರನ್ನು ಗಡಿಪಾರು ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಪ್ರಕಾಶ ಕುಲಕರ್ಣಿ, ಶಿವುಕುಮಾರ ಪಾಟೀಲ್ ತೇಲ್ಕೂರ, ಅನೀಲರೆಡ್ಡಿ ಸಂಗೇಂಪಲ್ಲಿ, ಕಾಶಿನಾಥ ನಿಡಗುಂದಾ ಸೇರಿದಂತೆ ಅನೇಕರು ಮಾತನಾಡಿದರು. ಶಿವುಕುಮಾರ ಬೋಳಶೆಟ್ಟಿ, ಶರಣು ಮೆಡಿಕಲ್, ನಾಗೇಂದ್ರಪ್ಪ ಸಾಹುಕಾರ, ಶಿವಲಿಂಗರೆಡ್ಡಿ ಬೆನಕನಹಳ್ಳಿ, ಬಸವರಾಜ ಭೂತಪೂರ, ಮನೋಹರ ದೊಂತಾ, ರಮೇಶ ಐನಾಪೂರ, ಶ್ರೀನಿವಾಸ ಕಾಸೋಜು, ನಾಗಪ್ಪ ಕೊಳ್ಳಿ, ಡಾ|ಶ್ರೀನಿವಾಸ ಮೊಕದಂ, ಡಾ|ರಾಜಕುಮಾರ ಬಿರಾದಾರ, ಬನ್ನಪ್ಪ ಕುಂಬಾರ, ಅನೀಲ ಐನಾಪೂರ, ಓಂಪ್ರಕಾಶ ಪಾಟೀಲ್, ಕಾಶಿನಾಥ ಕುಲಕರ್ಣಿ, ಮಲ್ಲಿಕಾರ್ಜುನ ಮೆಕ್ಯಾನಿಕ್, ಸಿದ್ದಯ್ಯಸ್ವಾಮಿ ನಾಡೇಪಲ್ಲಿ, ಮಹೇಶ ಪಾಟೀಲ್, ನಾರಾಯಣರಾವ ಕುಲಕರ್ಣಿ, ಶಿವರಾಯ ತೇಲ್ಕೂರ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಗೋವಿಂದ ಯಾಕಂಬ್ರಿ, ಜಗದೇವಪ್ಪ ಸಾಹುಕಾರ, ಸಂಗಪ್ಪ ಕುಂಬಾರ, ಅಶೋಕ ಪವಾರ, ತಿರುಪತಿ ಶಹಬಾದಕರ್, ರಾಘವೇಂದ್ರ ಮೆಕ್ಯಾನಿಕ್, ಶಿವಾನಂದಸ್ವಾಮಿ ಕೇಶ್ವಾರ, ಡಾ|ಮುರುಗೇಂದ್ರರೆಡ್ಡಿ ಬಿಲಕಲ್, ಆನಂದ ಮನ್ನೆ, ಸಂತೋಷ ರಂಜೋಳ, ಜನಾರ್ಧನರೆಡ್ಡಿ ತುಳೇರ್, ಯಲ್ಲಪ್ಪ ಮೇಸ್ತ್ರಿ, ಶ್ರೀಮಂತ ಅವಂಟಿ, ಅಂಕಿತ್ ಜೋಶಿ, ವಿಜಯ್ ಭಗತ್, ಕಾಶಿನಾಥ ದೊಡ್ಡಮನಿ, ಆನಂದ ಪತ್ರಿ, ರಾಜು ಕೋಸಗಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಭಾಗಿಯಾಗಿದ್ದರು.
ಬಾಂಗ್ಲಾದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಕ್ಷೇತ್ರದಲ್ಲಿ ಹಿಂದೂ ಯುವಕರ ಮೇಲೆ ನಡೆಸಲಾದ ದಾಳಿಯನ್ನು ಖಂಡಿಸಿ ಇಂದು ಸಮಸ್ತ ಹಿಂದೂಗಳ ಕೆರಳಿ ನಿಂತಿದ್ದಾರೆ. ಹಿಂದೂ ಯುವಕ ಮೇಲೆ ಹಲ್ಲೆ ನಡೆಸಿದವರು ಕ್ಷೇತ್ರದ ಶಾಸಕರ ಹಿಂಬಾಲಕರು ಎಂಬ ಕಾರಣಕ್ಕೆ ನಾಮಕಾವಾಸ್ತೆಗೆ ನಾಲ್ವರನ್ನು ಬಂಧಿಸಿ ಸಣ್ಣ ಪುಟ್ಟ ಪ್ರಕರಣಗಳನ್ನು ದಾಖಲಿಸುವ ಕೆಲಸ ಪೊಲೀಸರು ಮಾಡಿದ್ದಾರೆ. ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಜನ ಭಾಗಿಯಾಗಿದ್ದಾರೆ. ಅವರೆಲ್ಲರನ್ನು ಬಂಧಿಸುವ ಕೆಲಸ ಪೊಲೀಸರು ಮಾಡಬೇಕು. ಅಲ್ಲದೇ ಕಠೀಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. –
ರಾಜಕುಮಾರ ಪಾಟೀಲ್ ತೇಲ್ಕೂರ, ಮಾಜಿ ಶಾಸಕ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇತ್ತೀಚೆಗೆ ಸೇಡಂನಲ್ಲಿ ಹಿಂದೂ ಯುವಕರಿಗೆ ಅನ್ಯ ಕೋಮಿನ ಪುಂಡರ ಗುಂಪೊಂದು ನಡೆಸಿದ ಹಲ್ಲೆ ಪ್ರಕರಣ ಖಂಡಿಸಿ ಹಿಂದೂ ಸಮಾಜ ನೀಡಿದ ಸೇಡಂ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಪಟ್ಟಣದ ಕೆಲವು ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚುವ ಕೆಲಸ ಮಾಡಿದರೆ. ತೆರೆಯಲಾಗಿದ್ದ ಕೆಲ ಅಂಗಡಿಗಳನ್ನು ಮುಚ್ಚಿಸುವ ಕೆಲಸ ಪ್ರತಿಭಟನಾಕಾರರು ಮಾಡಿದರು. –
ಬಸ್, ಆಟೋ ಸಂಚಾರವಿಲ್ಲದೆ ಪರದಾರಿದ ಪ್ರಯಾಣಿಕರು.
ಹಿಂದೂ ಸಮಾಜ ನೀಡಿದ್ದ ಬಂದ್ ಕರೆಗೆ ಬಸ್, ಮತ್ತು ಆಟೋ ಸಂಚಾವಿಲ್ಲದೆ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕಲಬುರಗಿ ಮತ್ತು ನೆರೆ ತಾಲೂಕು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಸೇಡಂಗೆ ಆಗಮಿಸಿದ ಬಸ್, ಆಟೋ, ಕ್ರೋಸರ್ ಗಳನ್ನು ಕಲಬುರಗಿ ವೃತ್ತದ ಬಳಿ ತಡೆಯಲಾಗಿತ್ತು. ಕಲಬುರಗಿ ವೃತ್ತದಿಂದ ಬಸ್ ನಿಲ್ದಾಣಕ್ಕೆ ಮತ್ತು ಪಟ್ಟಣದ ಒಳಗೆ ಹೋಗಬೇಕಾಗಿದ್ದ ಪ್ರಯಾಣಿಕರು ನಡೆದುಕೊಂಡು ಹೋಗುವ ಸ್ಥತಿ ಎದುರಾಯಿತು.