ತಿರುವನಂತಪುರ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಗರದಲ್ಲಿ ಕಾರ್ಯಕ್ರಮಕ್ಕೆ ತೆರಳುವ ವೇಳೆ ಭದ್ರತಾ ಲೋಪ ಉಂಟಾಗಿದೆ. ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸಲಿವೆ.
ಹಿರಿಯ ಮುಖಂಡ ಪಿ.ಎನ್. ಪಣಿಕರ್ ಪುತ್ಥಳಿಯನ್ನು ಅನಾವರಣ ಮಾಡಲೆಂದು ರಾಷ್ಟ್ರಪತಿ ಕೋವಿಂದ್ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆ ವೇಳೆ ಕೇರಳ ಮೇಯರ್ ಆರ್ಯ ರಾಜೇಂದ್ರನ್ ಅವರ ಕಾರು ಕೂಡ ರಾಷ್ಟ್ರಪತಿಗಳ ಕಾರು ಮತ್ತು ಬೆಂಗಾವಲು ಪಡೆಯ ಜತೆಗೆ ತೆರಳಲು ಮುಂದಾಗಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ:ಕೃಷಿ ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.50 ಭರ್ತಿಗೆ ಕ್ರಮ: ಬಿ.ಸಿ.ಪಾಟೀಲ್
ಆದರೆ ಈ ಅಂಶವನ್ನು ಮೇಯರ್ ಕಚೇರಿ ನಿರಾಕರಿಸಿದೆ. ಇದರ ಜತೆಗೆ ರಾಷ್ಟ್ರಪತಿ ಕಾರ್ಯ ಕ್ರಮಕ್ಕೆ ತೆರಳಿದ್ದ ಸ್ಥಳದಲ್ಲಿ ಅವರಿಗೆ ವಿಶ್ರಾಂತಿ ಪಡೆಯಲು ನೀಡಲಾಗಿದ್ದ ಕೊಠ ಡಿಯ ಶೌಚಾಲಯದಲ್ಲಿ ನೀರಿನ ಸಂಪರ್ಕ ಸರಿಯಾಗಿರಲಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೂಡ ತನಿಖೆಗೆ ನಡೆಯಲಿದೆ.
ಈ ಅಂಶದ ಬಗ್ಗೆ ಕೇರಳ ಬಿಜೆಪಿ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.