Advertisement

Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ

11:37 PM Nov 19, 2024 | Team Udayavani |

ಚುರಾಚಾಂದ್‌ಪುರ: ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ಕುಕಿ ಸಮುದಾಯದ ನಡುವಿನ ಘರ್ಷಣೆಯಲ್ಲಿ ಮೃತಪಟ್ಟವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನೂರಾರು ಮಂದಿ ಖಾಲಿ ಶವಪೆಟ್ಟಿಗೆ ಹಿಡಿದು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

Advertisement

12ಕ್ಕೂ ಹೆಚ್ಚು ಕುಕಿ ಬಂಡುಕೋರರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ. ಇದೇ ವೇಳೆ, ಶಾಂತಿ ಮರುಸ್ಥಾಪಿ­ಸಲು ಎನ್‌ಡಿಎ ನಡೆಸಿದ ಸಭೆಯಲ್ಲಿ ಕಠಿಣ ಕ್ರಮ ಜರುಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ 27 ಶಾಸಕರು ಮೈತೇಯಿ ಸಮುದಾಯದ 6 ಮಂದಿಯ ಹತ್ಯೆಗೆ ಕಾರಣರಾದ ಬಂಡುಕೋರರನ್ನು ಶಿಕ್ಷಿಸಬೇಕು ಎಂಬ ನಿರ್ಧಾರ ತಾಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next