Advertisement

ರಾಣಿ ಎಲಿಜಬೆತ್ II ರಹಸ್ಯ ಪತ್ರ ಇನ್ನು 63 ವರ್ಷಗಳವರೆಗೆ ತೆರೆಯುವಂತಿಲ್ಲ!

07:41 PM Sep 12, 2022 | Team Udayavani |

ಲಂಡನ್ : ರಾಣಿ ಎಲಿಜಬೆತ್ II ಅವರು ಬರೆದ ರಹಸ್ಯ ಪತ್ರವನ್ನು ಸಿಡ್ನಿಯಲ್ಲಿನ ಕೋಣೆಯೊಂದರೊಳಗೆ ಲಾಕ್ ಮಾಡಲಾಗಿದೆ ಮತ್ತು ಕುತೂಹಲಕಾರಿ ಸಂಗತಿಯೆಂದರೆ, ಅದನ್ನು 63 ವರ್ಷಗಳವರೆಗೆ ತೆರೆಯಲಾಗುವುದಿಲ್ಲ!.

Advertisement

ವರದಿಗಳ ಪ್ರಕಾರ, ಈ ಪತ್ರವು ಸಿಡ್ನಿಯ ಐತಿಹಾಸಿಕ ಕಟ್ಟಡದ ಕೋಣೆಯೊಂದರೊಳಗೆ ಇದೆ ಮತ್ತು ಇದನ್ನು ನವೆಂಬರ್ 1986 ರಲ್ಲಿ ಅವರು ಬರೆದಿದ್ದಾರೆ ಮತ್ತು ಸಿಡ್ನಿಯ ಜನರನ್ನು ಉದ್ದೇಶಿಸಿ ಬರೆಯಲಾಗಿದೆ.ಯಾರಿಗೂ, ರಾಣಿಯ ವೈಯಕ್ತಿಕ ಸಿಬಂದಿಗೂ ಸಹ, ಪತ್ರದಲ್ಲಿ ಏನು ಬರೆಯಲಾಗಿದೆ ಎಂಬುದರ ಬಗ್ಗೆ ತಿಳಿದಿಲ್ಲ, ಏಕೆಂದರೆ ಅದನ್ನು ಸುರಕ್ಷಿತ ಸ್ಥಳದಲ್ಲಿ ಗಾಜಿನ ಪೆಟ್ಟಿಗೆಯೊಳಗೆ ಮರೆಮಾಡಲಾಗಿದೆ. ಇದನ್ನು 2085 ರವರೆಗೆ ತೆರೆಯಲಾಗುವುದಿಲ್ಲ.

ಸಿಡ್ನಿಯ ಲಾರ್ಡ್ ಮೇಯರ್ ಅವರನ್ನು ಉದ್ದೇಶಿಸಿ, ಸೂಚನೆಯು ಹೀಗಿದೆ: “2085 A.D ನಲ್ಲಿ ಸೂಕ್ತವಾದ ದಿನದಂದು, ದಯವಿಟ್ಟು ಈ ಲಕೋಟೆಯನ್ನು ತೆರೆಯಿರಿ ಮತ್ತು ಸಿಡ್ನಿಯ ನಾಗರಿಕರಿಗೆ ನನ್ನ ಸಂದೇಶವನ್ನು ತಿಳಿಸಿರಿ” ಎಂದು ರಾಣಿ ಹೇಳಿದ್ದಾರೆ ಎನ್ನಲಾಗಿದೆ.

ಪಾತ್ರದಲ್ಲಿ ಎಲಿಜಬೆತ್ ಆರ್ ಎಂದು ಸರಳವಾಗಿ ಸಹಿ ಮಾಡಲಾಗಿದೆ. ರಾಷ್ಟ್ರದ ಮುಖ್ಯಸ್ಥರಾಗಿ, ರಾಣಿ ಎಲಿಜಬೆತ್ II 16 ಬಾರಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು.ಆಸ್ಟ್ರೇಲಿಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next