Advertisement
ಸೀಟು ಹಂಚಿಕೆಯ ಫಲಿತಾಂಶ ಪರಿಶೀಲಿಸಿ ಅಭ್ಯರ್ಥಿಗಳು ನಮಗೆ ಬೇಕಾದ ಸೀಟಿನ ಆಧಾರದಲ್ಲಿ ಚಾಯ್ಸ ಆಯ್ಕೆ ಮಾಡಿಕೊಳ್ಳಬೇಕು. ನಾಲ್ಕು ಚಾಯ್ಸಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಅದರಿಂದ ಆಗಬಹುದಾದ ಪರಿಣಾಮದ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ಪ್ರಾಧಿಕಾರದಿಂದ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್ ಪಡೆಯಲು ಅರ್ಹತೆ ಹೊಂದಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಸೂಕ್ತ ಆಯ್ಕೆಯ ತೀರ್ಮಾನ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಈ ಸಂಬಂಧ ವಿವರವಾದ ಮಾಹಿತಿ ಪ್ರಾಧಿಕಾರದ ವೆಬ್ಸೈಟ್ //kea.kar.nic.in ನಲ್ಲಿ ಲಭ್ಯವಿದೆ.