ನಕಲು ತಡೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಹಿಂದೆ ಶಿಕ್ಷಕರೇ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದಂತಹ ಪ್ರಕರಣಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು ಕೂಡ ಮೊಬೈಲ್ ಫೋನ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮಾತ್ರ ಮೊಬೈಲ್ ಫೋನ್ ಹೊಂದಿರಲು ಅವಕಾಶ ಕಲ್ಪಿಸಲಾಗಿದೆ.
Advertisement
ನಿಗದಿತ ಅವಧಿಗಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರದಿಂದ ಹೊರಹೋಗುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.
ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬಂದಂತಹ ಸಂದರ್ಭದಲ್ಲಿ ಮರುಮೌಲ್ಯಮಾಪನಕ್ಕೆ ಹಾಕುವುದು ರೂಢಿ. ಅದರಲ್ಲೂ ಏನೂ ವ್ಯತ್ಯಾಸ ಕಂಡು ಬರದಿದ್ದರೆ ವಿದ್ಯಾರ್ಥಿಗಳು ತಾವು ಅಧಿಕ ಹಾಳೆ ಬರೆದಿದ್ದೇವೆ. ಆ ಹಾಳೆಗಳೇ ಕಾಣಿಸುತ್ತಿಲ್ಲ ಎಂದು ಕೋರ್ಟ್‌ಗೆ ಮೊರೆ ಹೋಗಿರುವ ಘಟನೆಗಳು ಈ ಹಿಂದೆ ನಡೆದಿದ್ದವು. ಅದನ್ನು ತಡೆಯುವ ಉದ್ದೇಶದಿಂದ ಒಟ್ಟು ಪುಟಗಳ ಸಂಖ್ಯೆಯನ್ನು ಪ್ರಥಮ ಪುಟ ಹಾಗೂ ಕೊನೆಯ ಪುಟಗಳಲ್ಲಿ ಕಡ್ಡಾಯವಾಗಿ ನಮೂದಿಸುವಂತೆ ಸೂಚಿಸಿರುವುದು ಈ ಬಾರಿಯ ವೈಶಿಷ್ಟé.
Related Articles
ಜಿಲ್ಲೆಯಲ್ಲಿ 27 ಪರೀಕ್ಷಾ ಕೇಂದ್ರಗಳಿವೆ. 7,470 ವಿದ್ಯಾರ್ಥಿನಿಯರು ಮತ್ತು 7,940 ವಿದ್ಯಾರ್ಥಿಗಳು ಸಹಿತ ಒಟ್ಟು 15,410 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 2018ರಲ್ಲಿ ಉಡುಪಿ ಜಿಲ್ಲೆ 90.67 ಶೇ. ಫಲಿತಾಂಶ ಪಡೆದು ದ್ವಿತೀಯ ಸ್ಥಾನ ಗಳಿಸಿತ್ತು.
Advertisement
ಸಿಬಂದಿಗೆ ತರಬೇತಿ ಪೂರ್ಣಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿಗೆ ಆಯಾಯ ಕಾಲೇಜುಗಳಲ್ಲಿ ಹಾಗೂ ಮೈಸೂರಿನಲ್ಲಿ ತರಬೇತಿ ನೀಡಲಾಗಿದೆ. ಮಾತ್ರವಲ್ಲದೆ ಉಡುಪಿಯಲ್ಲಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿಯೂ ತರಬೇತಿ ನಡೆದಿದೆ.
-ಸುಬ್ರಹ್ಮಣ್ಯ ಜೋಷಿ, , ಡಿಡಿಪಿಯು