Advertisement

Scraps: ಜಗನ್‌ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್‌ ವಿಸರ್ಜನೆ: ಆಂಧ್ರ ಸರ್ಕಾರ ಘೋಷಣೆ

03:31 AM Dec 02, 2024 | Team Udayavani |

ಅಮರಾವತಿ: ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವು ಹಿಂದಿನ ವೈಎಸ್‌ಆರ್‌ ಕಾಂಗ್ರೆಸ್‌ ಆಡಳಿತದಲ್ಲಿ ರಚಿಸಲಾಗಿದ್ದ ವಕ್ಫ್ ಮಂಡಳಿ ಯನ್ನು ವಿಸರ್ಜಿಸಿ ಆದೇಶ ಹೊರಡಿಸಿದೆ. ಅಲ್ಲದೇ ರಾಜ್ಯದಲ್ಲಿ ಹೊಸ ವಕ್ಫ್ ಮಂಡಳಿಯನ್ನು ರಚಿಸುವುದಾಗಿಯೂ ತಿಳಿಸಿದೆ.

Advertisement

ಭಾನುವಾರ ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ, ವೈಎಸ್‌ಆರ್‌ ಸರ್ಕಾರದಲ್ಲಿ ರಚನೆಯಾಗಿದ್ದ ವಕ್ಫ್ ಮಂಡಳಿ 2023ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿಲ್ಲ. ಮಂಡಳಿಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯಗಳ ವಿದ್ವಾಂಸರು ಹಾಗೂ ಮಾಜಿ ಸಂಸದರಿರಲಿಲ್ಲ. ಇದರಿಂದಾಗಿ ವಕ್ಫ್ ಕಾರ್ಯಾಚರಣೆಯಲ್ಲಿ ತೊಡಕುಂಟಾಗುತ್ತಿತ್ತು.

ಅಲ್ಲದೇ ಮಂಡಳಿ ಮುಖ್ಯಸ್ಥರ ನೇಮಕಾತಿ ಕುರಿತಂತೆ ಮಂಡಳಿ ಸದಸ್ಯರ ನಡುವೆಯೇ ಪರಸ್ಪರ ದೂರು ದಾಖಲಾಗಿದ್ದು, ಮುಖ್ಯಸ್ಥರ ಆಯ್ಕೆಗಾಗಿ ಚುನಾವಣೆ ನಡೆದಿಲ್ಲ ಎಂದು ತಿಳಿಸಿದೆ. ದೇಶಾದ್ಯಂತ ವಕ್ಫ್ ಮಸೂದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಆಂಧ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next