Advertisement

Waqf Property: ಅನಧಿಕೃತವಾಗಿ ಒತ್ತುವರಿಯಾದ ವಕ್ಫ್ ಆಸ್ತಿ ಮಾಹಿತಿ ಕೋರಿದ ಜೆಪಿಸಿ

03:54 AM Dec 02, 2024 | Team Udayavani |

ನವದೆಹಲಿ: ಸಾಚಾರ್‌ ಸಮಿತಿಗೆ ನೀಡಿರುವ ಮಾಹಿತಿಯಂತೆ ದೇಶದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿರುವ ವಕ್ಫ್ ಆಸ್ತಿಗಳ ಮಾಹಿತಿ ನೀಡುವಂತೆ ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆ ಜಂಟಿ ಸದನ ಸಮಿತಿಯು ವಿವಿಧ ರಾಜ್ಯ ಸರ್ಕಾರಗಳನ್ನು ಕೋರಿದೆ. ಜತೆಗೆ ವಕ್ಫ್ ಆಸ್ತಿಗಳ ಬಗ್ಗೆ ಪ್ರಸ್ತುತದ ವಿಸ್ತೃತ ವರದಿ ನೀಡುವಂತೆಯೂ ಕೇಳಿದೆ.

Advertisement

ವಕ್ಫ್ ಕಾಯ್ದೆ ಸೆಕ್ಷನ್‌ 40 ಚಲಾಯಿಸಿ ವಕ್ಫ್ ಬೋರ್ಡ್‌ಗಳು ಹಕ್ಕು ಪ್ರತಿಪಾದಿಸಿರುವ ಆಸ್ತಿಗಳ ಬಗ್ಗೆಯೂ ರಾಜ್ಯಗಳಿಂದ ಜೆಪಿಸಿ ಮಾಹಿತಿ ಬಯಸಿದೆ. 2013ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಸೆಕ್ಷನ್‌ 40ಕ್ಕೆ ತಿದ್ದುಪಡಿ ತಂದಿದ್ದು ಯಾವುದೇ ಆಸ್ತಿ ವಕ್ಫ್ಗೆ ಸೇರಿಧ್ದೋ ಅಲ್ಲವೋ ಎಂದು ನಿರ್ಧರಿಸುವ ಅಧಿಕಾರವನ್ನು ವಕ್ಫ್ ಬೋರ್ಡ್‌ಗಳಿಗೆ ನೀಡಿತ್ತು.

2005-06ರಲ್ಲಿ ವಿವಿಧ ರಾಜ್ಯಗಳ ವಕ್ಫ್ ಬೋರ್ಡ್‌ಗಳು ಅನಧಿಕೃತ ಒತ್ತುವರಿ ಮಾಡಿರುವ ಬಗ್ಗೆ ಸಾಚಾರ್‌ ಸಮಿತಿಗೆ ಮಾಹಿತಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಮೂಲಕ ವಿವಿಧ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲು ಸದನ ಸಮಿತಿ ಮುಂದಾಗಿದೆ.

ಮೂಲಗಳ ಪ್ರಕಾರ, ಸಾಚಾರ್‌ ಸಮಿತಿ ವರದಿಯಂತೆ ದೆಹಲಿಯಲ್ಲಿ 316, ರಾಜಸ್ಥಾನದಲ್ಲಿ 60, ಕರ್ನಾಟದಲ್ಲಿ 42, ಉತ್ತರ ಪ್ರದೇಶದಲ್ಲಿ 60 ಮತ್ತು ಒಡಿಶಾದಲ್ಲಿ 53 ಇಂತಹ ಆಸ್ತಿಗಳಿವೆ. ಈ 6 ರಾಜ್ಯಗಳಿಂದ ಆಸ್ತಿಗಳ ಬಗ್ಗೆ ಪ್ರಸ್ತುತದ ಮಾಹಿತಿಯನ್ನು ಬಯಸಲಾಗಿದೆ. ಜತೆಗೆ ಇತರ ಹಲವು ರಾಜ್ಯಗಳಿಂದಲೂ ಮಾಹಿತಿ ಪಡೆಯಲು ಜಗದಾಂಬಿಕಾ ಪಾಲ್‌ ನೇತೃತ್ವದ ಸಮಿತಿ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next