Advertisement

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

11:05 PM Nov 22, 2024 | Team Udayavani |

ಬೆಂಗಳೂರು: ಸೋಮೇಶ್ವರ ದೇಗುಲ ನಿರ್ಮಾಣವಾದಾಗ, ವಿರಕ್ತ ಪರಂಪರೆಯ ಮಠದ ಅಭ್ಯುದಯದ ಕಾಲದಲ್ಲಿ 1,500 ವರ್ಷದ ಹಿಂದೆ ಈ ದೇಶದಲ್ಲಿ “ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲ”. ಅಂಥವರು ಇಂದು ಅದು ನಮ್ಮದು, ನಮಗೆ ಕೊಡಬೇಕು, ಎಂದು ಕೇಳುವ ಧಾರ್ಷ್ಟ್ಯ ಎಲ್ಲಿಂದ ಬಂತು? ಅದಕ್ಕೆ ಮೂಲ ಕಾರಣ ಕಾಂಗ್ರೆಸ್‌ನ  ತುಷ್ಟಿಕರಣದ ನೀತಿ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಿಎಂಗೆ ಜಮೀರ್‌ ಯಾವಾಗ ಬತ್ತಿ ಇಡುತ್ತಾರೋ?: 
ವಕ್ಫ್ ವಿವಾದದ ಕುರಿತಾಗಿ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟಕ್ಕೆ ರಾಜ್ಯ ಬಿಜೆಪಿ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ  ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, “ವಕ್ಫ್ ಬೋರ್ಡ್‌ಗೆ ಕೊಟ್ಟ ಅಧಿಕಾರ ತೋಳದ ಬಳಿ ಕುರಿಮರಿ ನ್ಯಾಯ ಕೇಳುವಂತಾಗಿದೆ. ಇವತ್ತಿನ ಕಾಲಘಟ್ಟದಲ್ಲಿ ಕಾಂಗ್ರೆಸ್‌  ತಾನು ಷರೀಯಾ ಪರವೇ? ಸಂವಿಧಾನದ ಪರವೇ? ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ರನ್ನು ನಂಬಿದ್ದಾರೆ. ಆದರೆ ಅವರು ಯಾವಾಗ ಬತ್ತಿ ಇಡುತ್ತಾರೆ ಗೊತ್ತಿಲ್ಲ, ಹೈದರಾಲಿಯ ನಂಬಿದ್ದ ಮೈಸೂರು ರಾಣಿ ಲಕ್ಷ್ಮಮ್ಮಣ್ಣಿ ಕೆಟ್ಟರು. ಅದೇ ಪರಿಸ್ಥಿತಿ ಸಿದ್ದರಾಮಯ್ಯ ಅವರದ್ದಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ವಿಧಾನ ಸೌಧ ನಮ್ಮದು ಎನ್ನುತ್ತಿದೆ ವಕ್ಫ್‌:
ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ ನಮ್ಮ ವಕ್ಫ್‌ ಬೋರ್ಡ್‌ಗೆ ಸೇರಿದ್ದು ಎಂದು ಹೇಳುತ್ತಾರೆ. ಕಾಂಗ್ರೆಸ್ ಕೊಟ್ಟ ಪರಮಾಧಿಕಾರದಿಂದ ಈ ಸೊಕ್ಕು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಳೆ ವಿಧಾನಸೌಧ, ನಮ್ಮದು ಇಲ್ಲಿ ನಮಾಜ್ ಮಾಡಲು ಮಾತ್ರ ಅವಕಾಶ ಹೊರತು ಚರ್ಚೆ ಮಾಡುವ ಹಾಗಿಲ್ಲ ಎಂದರೆ ಸಿದ್ದರಾಮಯ್ಯ ಪಂಚೆ ಎತ್ತುಕೊಂಡು ಹೋಗಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು‌.

ಈ ಹೋರಾಟ ಸಂವಿಧಾನ ಉಳಿಸುವ ಹೋರಾಟವಾಗಿದೆ‌. ಔರಂಗಜೇಬ್ ಕಾಲದ ಜಿಜಿಯಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇರಬಾರದು ಎಂಬ ಕಾರಣಕ್ಕಾಗಿ ಹೋರಾಟವಾಗಿದೆ‌. ಈಗ ಇರುವ ವಕ್ಫ್  ಕಾಯ್ದೆಯ ಪ್ರಕಾರ ಯಾವುದೇ ಜಮೀನಿಗೆ ವಕ್ಪ್ ಬೋರ್ಡ್ ದಾಖಲೆ ಕೊಡಬೇಕಾಗಿಲ್ಲ. ಇಂತಹ ಸಂವಿಧಾನ ವಿರೋಧಿ ಕಾಯ್ದೆ ರದ್ದಾಗಬೇಕು ಎಂದು ಆಗ್ರಹಿಸಿದರು.

Advertisement

ಸಿದ್ದರಾಮಯ್ಯ ʼಕನ್ನದ ರಾಮಯ್ಯʼ
ವಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ ಸಿದ್ದರಾಮಯ್ಯನವರು ಅನ್ನ ನೀಡುವ ರೈತರ ಜಮೀನಿಗೆ ವಕ್ಫ್‌ ಬೋರ್ಡ್‌ನಿಂದ ನೋಟಿಸ್‌ ಕಳಿಸಿ ಕನ್ನ ಹಾಕಿದರು. ಬಡವರ ಬಿಪಿಎಲ್‌  ಕಾರ್ಡ್‌ಗೆ ಕನ್ನ ಹಾಕಿ ಅನ್ನ ಕಸಿದರು. ಆಸ್ಪತ್ರೆಗೆ ಕಾಯಿಲೆ ಬಂತು ಅಂತ ದಾಖಲಾದರೆ ಅಲ್ಲೂ ಲೂಟಿ ಮಾಡಿ‌ ಕನ್ನ ಹಾಕಿದರು. ಸಿದ್ದರಾಮಯ್ಯ ರಾಜ್ಯದ ಬಡವರನ್ನು ವಸೂಲಿ ಮಾಡಿ ಕನ್ನ ಹಾಕುವ ಕನ್ನರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next