Advertisement

ಎಸ್‌ಸಿಡಿಸಿಸಿ ಬ್ಯಾಂಕಿನ ಸಿಬಂದಿ ಸೇವೆಗೆ ಬದ್ಧರಾಗಬೇಕು: ಡಾ|ಎಂ.ಎನ್‌

05:30 PM Oct 29, 2017 | Team Udayavani |

ಮಂಗಳೂರು, ಅ. 28: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಯಶಸ್ಸಿನ ಹಿಂದೆ ಬ್ಯಾಂಕಿನ ಆಡಳಿತ ವರ್ಗ, ಸಿಬಂದಿಯ ಶ್ರಮದ ಜತೆಗೆ ಗ್ರಾಹಕರ ಕೊಡುಗೆಯೂ ಇದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. ಅವರು ಶನಿವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ನಡೆದ 102 ಶಾಖೆಗಳ ಶಾಖಾ ವ್ಯವಸ್ಥಾಪಕರು ಹಾಗೂ ಬ್ಯಾಂಕಿನ ಸಿಬಂದಿಯ ಸಭೆಯಲ್ಲಿ ಮಾತನಾಡಿದರು.

Advertisement

ಎಸ್‌ಸಿಡಿಸಿಸಿ ಬ್ಯಾಂಕ್‌ ಇಂದು ಸಮಗ್ರ ಅಭಿವೃದ್ಧಿ ಯೊಂದಿಗೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಯಶಸ್ಸು ಹೀಗೆಯೇ ಮುಂದುವರಿಯಬೇಕು. ಬ್ಯಾಂಕ್‌ ಹಲವು ಸಮಸ್ಯೆಗಳನ್ನು ಎದುರಿಸಿದಾಗ ನಮ್ಮೊಂದಿಗೆ ಸಹಕರಿಸಿ ಅಭಿವೃದ್ಧಿಯ ಮುಂಚೂಣಿಗೆ ಸಾಗುವಲ್ಲಿ ಸಿಬಂದಿ ಪ್ರಮುಖ ಪಾತ್ರ ವಹಿಸಿ ದ್ದಾರೆ. ಅವರು ಇನ್ನಷ್ಟು ಗುಣಮಟ್ಟದ ಸೇವೆಯ ಮೂಲಕ ಬ್ಯಾಂಕಿನ ಏಳಿಗೆಗೆ ಬದ್ಧರಾಗಬೇಕು ಎಂದರು.

ಬ್ಯಾಂಕಿನ ಸಿಬಂದಿಯ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗಿದ್ದು, ಪಿಂಚಣಿ ಯೋಜನೆಯೂ ಚಾಲ್ತಿಯಲ್ಲಿದೆ. ಬ್ಯಾಂಕಿನ ನೌಕರರ ಕ್ಷೇಮಾಭಿವೃದ್ಧಿ ಯನ್ನು ಬ್ಯಾಂಕಿನ ಆಡಳಿತ ವರ್ಗ ಬಯಸಿದೆ ಎಂದು ಹೇಳಿದರು. ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಟಿ.ಜಿ. ರಾಜಾರಾಮ್‌ ಭಟ್‌, ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾತನಾಡಿದರು. ಸಿಬಂದಿಯ ಪರವಾಗಿ ಬ್ಯಾಂಕಿನ ಉಪಮಹಾಪ್ರಬಂಧಕ ಕೃಷ್ಣ ಬಿಲ್ಲವ ಅವರು ಅನಿಸಿಕೆ ತಿಳಿಸಿದರು.

ಬ್ಯಾಂಕಿನ ನಿರ್ದೇಶಕರಾದ ಬಿ. ನಿರಂಜನ್‌, ಭಾಸ್ಕರ ಎಸ್‌. ಕೋಟ್ಯಾನ್‌, ಬಿ. ರಘುರಾಮ ಶೆಟ್ಟಿ, ಎಂ. ವಾದಿರಾಜ ಶೆಟ್ಟಿ, ಕೆ.ಎಸ್‌. ದೇವರಾಜ್‌, ಸದಾಶಿವ ಉಳ್ಳಾಲ, ರಾಜೇಶ್‌ ರಾವ್‌, ಎಸ್‌.ಬಿ. ಜಯರಾಮ್‌ ರೈ, ಸಹಕಾರ ಸಂಘಗಳ ಉಪನಿಂಬಂಧಕ ಬಿ.ಕೆ. ಸಲೀಂ, ಮಹಾಪ್ರಬಂಧಕ ರವೀಂದ್ರ ಬಿ., ಸಲಹೆಗಾರ ಹಿಮವಂತ್‌ ಗೋಪಾಲ್‌ ಉಪಸ್ಥಿತರಿದ್ದರು. ನಿರ್ದೇಶಕ ಶಶಿಕುಮಾರ್‌ ರೈ ಕಾರ್ಯಕ್ರಮ ನಿರ್ವಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next