Advertisement

ಎಐಎಡಿಎಂಕೆ 18 ಶಾಸಕರ ಅನರ್ಹತೆ ಕೇಸ್‌: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

12:10 PM Jun 25, 2018 | udayavani editorial |

ಹೊಸದಿಲ್ಲಿ : ತಮ್ಮ ಶಾಸಕತ್ವ ಅನರ್ಹತೆ ಕುರಿತಾಗಿ ಮದ್ರಾಸ್‌ ಹೈಕೋರ್ಟ್‌ ವಿಭಜಿತ ತೀರ್ಪು ನೀಡಿರುವ ಕಾರಣ ತಮ್ಮ ಕೇಸನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಕೋರಿ ಎಐಎಡಿಎಂಕೆ ಪಕ್ಷದ 18 ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಇಂದು ಸೋಮವಾರ ಒಪ್ಪಿಕೊಂಡಿದೆ. 

Advertisement

ಜಸ್ಟಿಸ್‌ ಅರುಣ್‌ ಮಿಶ್ರಾ ಮತ್ತು ಜಸ್ಟಿಸ್‌ ಎಸ್‌ ಕೆ ಕೌಲ್‌ ಅವರನ್ನು ಒಳಗೊಂಡ ರಜಾಕಾಲದ ಪೀಠವು, ಎಐಎಡಿಎಂಕೆ 18 ಶಾಸಕರ ಅನರ್ಹತೆಯ ಪ್ರಶ್ನೆಯನ್ನು ತಾನು ನಾಡಿದ್ದು  ಕೈಗೆತ್ತಿಕೊಳ್ಳುವುದಾಗಿ ಹೇಳಿತು. 

ಕಳೆದ ಜೂನ್‌ 14ರಂದು ಮದ್ರಾಸ್‌ ಹೈಕೋರ್ಟ್‌ ಈ ವಿಷಯದಲ್ಲಿ ವಿಭಜಿತ ತೀರ್ಪು ನೀಡಿರುವುದರಿಂದ ಈಗಿನ್ನು ಅಲ್ಲಿ ಮೂರನೇ ನ್ಯಾಯಾಧೀಶರು ಪ್ರಕರಣದ ಹೊಸ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ; ಆದರೆ ಇದು ಒಂದು ಗಂಭೀರ ವಿಷಯವಾಗಿರುವುದರಿಂದ ಸುಪ್ರೀಂ ಕೋರ್ಟ್‌ ಇದರ ವಿಚಾರಣೆ ನಡೆಸಬೇಕು ಎಂದು 18 ಶಾಸಕರ ಪರವಾಗಿ ಹಾಜರಿದ್ದ ಹಿರಿಯ ನ್ಯಾಯವಾದಿ ವಿಕಾಸ್‌ ಸಿಂಗ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next