ಹೊಸದಿಲ್ಲಿ : 2019ರ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ) ಯಲ್ಲಿ ಆರ್ಥಿಕವಾಗಿ ದುರ್ಬಲರಿರುವರಿಗೆ ಶೇ.10ರ ಮೀಸಲಾತಿಯನ್ನು ಒದಗಿಸಬೇಕೆಂಬ ಕೋರಿಕೆಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಗುರುವಾರ ಕೇಂದ್ರ ಮತ್ತು ಸಿಬಿಎಸ್‌ಇ ಗೆ ನೊಟೀಸ್ ಜಾರಿ ಮಾಡಿದೆ.
ಜಸ್ಟಿಸ್ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರನ್ನು ಒಳಗೊಂಡ ರಜಾಕಾಲದ ಪೀಠವು ಕೇಂದ್ರ ಸರಕಾರ ಮತ್ತು ಸಿಬಿಎಸ್‌ಇ ಗೆ ಮುಂದಿನ ವಿಚಾರಣಾ ದಿನಾಂಕವಾಗಿರುವ ಜುಲೈ 1ರೊಳಗೆ ಉತ್ತರಿಸುವಂತೆ ನೊಟೀಸ್ ಜಾರಿ ಮಾಡಿತು.
ಆರ್ಥಿಕವಾಗಿ ದುರ್ಬಲರಿರುವ ವರ್ಗದ ಮತ್ತು 2019ರ ಸಿಟಿಇಟಿ ಪರೀಕ್ಷೆ ಬರೆಯುಲು ಉತ್ಸುಕರಾಗಿರುವ ಕೆಲವು ಅರ್ಜಿದಾರರು ಶೇ.10ರ ಮೀಸಲಾತಿ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದರು.