ನವದೆಹಲಿ: ಭಾರತದ ಒಂದಿಂಚು ಭೂಮಿಯನ್ನು ಕಬಳಿಸಲು ಚೀನಾಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿ ಚೀನಾ ಸೈನಿಕರ ಜತೆಗಿನ ಮುಖಾಮುಖಿಯಲ್ಲಿ ಭಾರತೀಯ ಸೇನಾ ಪಡೆ ತಕ್ಕ ಪ್ರತ್ಯುತ್ತರದೊಂದಿಗೆ ಹಿಮ್ಮೆಟ್ಟಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ (ಡಿಸೆಂಬರ್ 13) ತಿಳಿಸಿದ್ದಾರೆ.
ಇದನ್ನೂ ಓದಿ:ಶಿಕ್ಷಾರ್ಹ ಅಪರಾಧ… “ಈ” ದೇಶದಲ್ಲಿ ಸಮೋಸಾ ತಯಾರಿಸುವುದು, ತಿನ್ನುವುದು ನಿಷೇಧ!
“ಚೀನಾಕ್ಕೆ ಭಾರತದ ಒಂದಿಂಚೂ ಭೂಮಿಯನ್ನು ಕಬಳಿಸಲು ಸಾಧ್ಯವಾಗಿಲ್ಲ. ತವಾಂಗ್ ಪ್ರದೇಶದಲ್ಲಿ ಭಾರತೀಯ ಸೈನಿಕರು ಧೈರ್ಯ ಮತ್ತು ಶೌರ್ಯದೊಂದಿಗೆ ತಕ್ಷಣವೇ ಚೀನಾ ಪಡೆಗೆ ತಕ್ಕ ಉತ್ತರ ನೀಡಿ ಹಿಮ್ಮೆಟ್ಟಿಸಿದೆ. ಪ್ರಧಾನಿ ಮೋದಿ ಇರುವವರೆಗೆ ಭಾರತದ ಒಂದಿಂಚೂ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸತ್ ಹೊರ ಆವರಣದಲ್ಲಿ ಶಾ ಸುದ್ದಿಗಾರರಗೊಂದಿಗೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ.
ಚೀನಾದಿಂದ ರಾಜೀವ್ ಗಾಂಧಿ ಫೌಂಡೇಶನ್ ಹಣ ಪಡೆದಿತ್ತು:
ಸಂಸತ್ ಕಲಾಪದಲ್ಲಿ ತವಾಂಗ್ ಕುರಿತಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರ ನೀಡುವ ವೇಳೆ ಕಾಂಗ್ರೆಸ್ ಸಂಸದರು ಕೋಲಾಹಲ ಎಬ್ಬಿಸುತ್ತಾರೆ. ಒಂದು ವೇಳೆ ಅವರು ಮಾತನಾಡಲು ಅವಕಾಶ ನೀಡಿದರೆ ನಾನು ಉತ್ತರ ನೀಡಲು ಸಿದ್ದನಿದ್ದೇನೆ ಎಂದು ಅಮಿತ್ ಶಾ ತಿರುಗೇಟು ನೀಡಿದ್ದಾರೆ.
2005-2006 ಮತ್ತು 2006-2007ನೇ ಸಾಲಿನಲ್ಲಿ ರಾಜೀವ್ ಗಾಂಧಿ ಫೌಂಡೇಶನ್ ಚೀನಾ ರಾಯಭಾರಿ ಕಚೇರಿಯಿಂದ 1.35 ಕೋಟಿ ರೂಪಾಯಿ ಅನುದಾನ ಪಡೆದಿತ್ತು. ಆದರೆ ಅದು ಎಫ್ ಸಿಆರ್ ಎ ನಿಯಮದ ಉಲ್ಲಂಘನೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ರಿಜಿಸ್ಟ್ರೇಶನ್ ಅನ್ನು ರದ್ದುಪಡಿಸಿದೆ ಎಂದು ಶಾ ತಿಳಿಸಿದ್ದಾರೆ.