Advertisement

ಸಾಹಸಿಗರ ತಾಣ ಸಾವನದುರ್ಗ

07:22 AM Feb 04, 2019 | |

ಮಾಗಡಿ: ಮಾಗಡಿಯನ್ನು ರಾಜ್ಯದ ಕೆಲವೆಡೆ ಸಾವನದುರ್ಗ ಪ್ರವಾಸಿ ತಾಣದ ಮೂಲಕ ಗುರುತಿಸಲ್ಪಡುವುದು ಅತಿಶಯೋಕ್ತಿ ಏನಲ್ಲ. ಇಲ್ಲಿರುವ ಏಕಶಿಲಾ ಬೆಟ್ಟ ಚಾರಣಿಗರ, ಸಾಹಸಿಗರ ತಾಣವಾಗಿದೆ. ಹೆಸರಿಗೆ ತಕ್ಕಂತೆ ದುರ್ಗಮಯ. ಪ್ರಕೃತಿದತ್ತ ರಮ್ಯ ತಾಣ, ಶ್ರೀಲಕ್ಷ್ಮೀನರಸಿಂಹಸ್ವಾಮಿ ಮತ್ತು ಶ್ರೀವೀರಭದ್ರ ಸ್ವಾಮಿ ದೇವಾಲಯಗಳು ಇಲ್ಲಿದ್ದು ರಾಜ್ಯಾದ್ಯಂತ ಭಕ್ತರನ್ನು ಸೆಳೆಯುತ್ತಿದೆ.

Advertisement

ಒಟ್ಟು 7 ಸಾವಿರ ಎಕರೆ ಪ್ರದೇಶದಲ್ಲಿ ಕಾನನವಿದೆ. ಸಾವನದುರ್ಗದಲ್ಲಿರುವ ಬಿಳಿ ಮತ್ತು ಕಪ್ಪು ಕಲ್ಲಿನ ಬೆಟ್ಟ ಶ್ರೇಣಿ ಪ್ರಕೃತಿಯ ಅದ್ಬುತ. ಈ ಕಾನನದಲ್ಲಿ ಶ್ರೀಗಂಧ, ಬೀಟೆ, ತೇಗ ಜಾತಿಯ ಮರಗಳು, ಔಷಧಿಯ ಸಸ್ಯಗಳು, ಆನೆ, ಕರಡಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ವಾಸಸ್ಥಾನವಾಗಿದೆ. ನಿರ್ವಹಣೆ ಇಲ್ಲದೆ ವಿನಾಶದ ಹಂಚಿನಲ್ಲಿದೆ. ಸರ್ಕಾರ ಇಲ್ಲಿನ ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿಗೆ ಸೂಕ್ತ ಕ್ರಮ ಕೈಕೊಳ್ಳಬೇಕಾದ ಅಗತ್ಯವಿದೆ.

ನಾಯಕನಪಾಳ್ಯದ ಪಾಳೇಗಾರ ಸಾವನದುರ್ಗದ ಬೆಟ್ಟದ ಮೇಲೆ ಏಳು ಸುತ್ತಿನ ಕಲ್ಲಿನ ಕೋಟೆ ಕಟ್ಟಿದ್ದಾರೆ. ಬೆಟ್ಟದ ಮೇಲೆ ಸುಂದರ ನಂದಿ ವಿಗ್ರಹ ಸ್ಥಾಪಿಸಲಾಗಿದೆ. ಜೊತೆಗೆ ಗುಡಿ, ಗೋಪುರಗಳು, ಗುರುಮನೆ ಕಟ್ಟಿ ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಇಲ್ಲಿನ ಅವಶೇಷಗಳೇ ಕಥೆ ಹೇಳುತ್ತವೆ.

ಈ ದುರ್ಗದ ಬುಡದಲ್ಲಿರು ನೆಲಪಟ್ಟಣದಿಂದ ಮುಖ್ಯ ದುರ್ಗಕ್ಕಿರುವ ಏಕೈಕ ರಹಸ್ಯ ಕಾಲುದಾರಿ ಬಲು ಅಪಾಯಕಾರಿ. ಇಕ್ಕಾಟದ ಈ ಕಾಲುದಾರಿಯಲ್ಲಿ ನಡೆಯುವಾಗ ದಾರಿ ಮಧ್ಯದಲ್ಲಿ ಪಾತಳವಿದೆ. ಈ ಕಂದಕದ ಅಳ ಅರಿತವರಿಲ್ಲ. ಹಿಂದೆ ಇದನ್ನು ದಾಟುವಾಗ ಮರದ ದಿಮ್ಮಿಗಳನ್ನು ಬಳಸುತ್ತಿದ್ದರಂತೆ. ಸಾಹಸಿಗರಿಗೆ ಈ ದುರ್ಗ ನಿಜಕ್ಕೂ ಸವಾಲಾಗಿದೆ. ಆದರೂ ಇಂದಿಗೂ ಎಷ್ಟೋ ಪ್ರವಾಸಿಗರು, ಚಾರುಣ ಪ್ರಿಯರು ಈ ಬೆಟ್ಟವನ್ನು ಹತ್ತವ ಸಾಹಸದ ಪ್ರಯತ್ನ ನಡೆಯುತ್ತಲೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next