Advertisement

ಸಮುದ್ರದ ಮೂಲಕ ಹಜ್‌ ಪ್ರಯಾಣಕ್ಕೆ ಸೌದಿ ಅಸ್ತು

06:35 AM Jan 09, 2018 | Harsha Rao |

ಹೊಸದಿಲ್ಲಿ: ಹಜ್‌ ಯಾತ್ರಿಕರಿಗೆ ಅಗ್ಗದ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಸಮುದ್ರದ ಮೂಲಕ ಯಾತ್ರಿಗಳನ್ನು ಕಳುಹಿಸುವ ಸರಕಾರದ ಪ್ರಸ್ತಾಪಕ್ಕೆ ಸೌದಿ ಅರೇಬಿಯಾ ಸರಕಾರ ಒಪ್ಪಿಗೆ ನೀಡಿದೆ. ಹೀಗಾಗಿ, ಹಡಗಿನಲ್ಲಿ ಹಜ್‌ ಯಾತ್ರೆ ಕೈಗೊಳ್ಳುವ ವ್ಯವಸ್ಥೆಯು ಬರೋಬ್ಬರಿ 23 ವರ್ಷಗಳ ಬಳಿಕ ಮತ್ತೂಮ್ಮೆ ಆರಂಭವಾಗಲಿದೆ.

Advertisement

ಈ ಕುರಿತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖಾ¤ರ್‌ ಅಬ್ಟಾಸ್‌ ನಖೀÌ ಸೋಮವಾರ ಮಾಹಿತಿ ನೀಡಿದ್ದಾರೆ. ಸೌದಿ ಅರೇಬಿಯಾದ ಹಜ್‌ ಮತ್ತು ಉಮ್ರಾ ಸಚಿವ ಮೊಹಮ್ಮದ್‌ ಸಲೇಹ್‌ ಬಿನ್‌ ತಾಹೇರ್‌ ಬೆಂಟೆನ್‌ ಅವರೊಂದಿಗೆ ರವಿವಾರ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಂಬರುವ ವರ್ಷಗಳಲ್ಲಿ ಹಡಗುಗಳ ಮೂಲಕ ಯಾತ್ರಿಕರನ್ನು ಕಳುಹಿಸುವುದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಸಚಿವ ನಖೀÌ ತಿಳಿಸಿದ್ದಾರೆ. ಜತೆಗೆ, ಇದೊಂದು ಕ್ರಾಂತಿಕಾರಿ, ಯಾತ್ರಿಗಳ ಸ್ನೇಹಿ ಹಾಗೂ ಬಡವರ ಪರ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಆದರೆ, ಯಾವ ವರ್ಷದಿಂದ ಇಂಥ ವ್ಯವಸ್ಥೆ ಜಾರಿಯಾಗಲಿದೆ ಎಂಬ ಬಗ್ಗೆ ಅವರು ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next