Advertisement

Saudi Airlines: ಲ್ಯಾಂಡಿಂಗ್ ವೇಳೆ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ…

04:42 PM Jul 11, 2024 | Team Udayavani |

ಪೇಶಾವರ: ಲ್ಯಾಂಡಿಂಗ್ ವೇಳೆ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಪಾಕಿಸ್ತಾನದ ಪೇಶಾವರ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.

Advertisement

ಸೌದಿ ಏರ್‌ಲೈನ್ಸ್ ವಿಮಾನ ರಿಯಾದ್‌ ನಿಂದ ಪೇಶಾವರಕ್ಕೆ ಹೊರಟಿದ್ದು ಈ ವೇಳೆ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಗೇರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ ಗಾಳಿ ತುಂಬಿದ ಸ್ಲೈಡ್ ಬಳಸಿ ವಿಮಾನದಲ್ಲಿದ್ದ ಎಲ್ಲಾ 276 ಪ್ರಯಾಣಿಕರು ಮತ್ತು 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಕೂಡಲೇ ಅಗ್ನಿ ಶಾಮಕ ತಂಡ ಬೆಂಕಿ ನಂದಿಸಿ ಸಂಭವಿಸಬಹುದಾದ ಹೆಚ್ಚಿನ ಅವಘಡವನ್ನು ತಪ್ಪಿಸಿದೆ.

ಇದನ್ನೂ ಓದಿ: Puri Jagannath ರತ್ನ ಭಂಡಾರದ ನಿಧಿಗೆ “ಸರ್ಪಗಾವಲು”…ಅಧಿಕಾರಿಗಳು ಭಯ ಪಡುತ್ತಿರುವುದೇಕೆ!

 

Advertisement

Advertisement

Udayavani is now on Telegram. Click here to join our channel and stay updated with the latest news.

Next