Advertisement

Pakistan vs Bangladesh: ಮಿರಾಜ್‌ಗೆ 5 ವಿಕೆಟ್‌; ಪಾಕ್‌ 274 ಆಲೌಟ್‌

08:06 PM Aug 31, 2024 | Team Udayavani |

ರಾವಲ್ಪಿಂಡಿ: ದ್ವಿತೀಯ ದಿನ ಮೊದಲ್ಗೊಂಡ ಪಾಕಿಸ್ಥಾನ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶದ ಬೌಲರ್ ಗಳು ಮೇಲುಗೈ ಸಾಧಿಸಿದ್ದಾರೆ. ಪಾಕ್‌ 274 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್‌ ಆಗಿದ್ದು, ಬಾಂಗ್ಲಾ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಮಾಡಿದೆ.

Advertisement

ಆಫ್ಸ್ಪಿನ್ನರ್‌ ಮೆಹಿದಿ ಹಸನ್‌ ಮಿರಾಜ್‌ ತಮ್ಮ ಘಾತಕ ದಾಳಿಯನ್ನು ಮುಂದುವರಿಸಿ 5 ವಿಕೆಟ್‌ ಬೇಟೆಯಾಡಿದರು. ಮಧ್ಯಮ ವೇಗಿ ತಸ್ಕಿನ್‌ ಅಹ್ಮದ್‌ 3 ವಿಕೆಟ್‌ ಉರುಳಿಸಿದರು.

ತಸ್ಕಿನ್‌ ಅಹ್ಮದ್‌ ಮೊದಲ ಓವರ್‌ನಲ್ಲೇ ಅಬ್ದುಲ್ಲ ಶಫೀಕ್‌ (0) ವಿಕೆಟ್‌ ಉಡಾಯಿಸಿ ಪಾಕಿಸ್ಥಾನಕ್ಕೆ ಆಘಾತವಿಕ್ಕಿದರು. ಆದರೆ 2ನೇ ವಿಕೆಟಿಗೆ ಜತೆಗೂಡಿದ ಸೈಮ್‌ ಅಯೂಬ್‌ (58) ಮತ್ತು ನಾಯಕ ಶಾನ್‌ ಮಸೂದ್‌ (57) 107 ರನ್‌ ಜತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಕೊನೆಯಲ್ಲಿ ಆಘಾ ಸಲ್ಮಾನ್‌ ಅರ್ಧ ಶತಕದ ಕೊಡುಗೆ ಸಲ್ಲಿಸಿದರು (54).

ಶುಕ್ರವಾರದ ಮೊದಲ ದಿನದಾಟ ಭಾರೀ ಮಳೆಯಿಂದ ರದ್ದುಗೊಂಡಿತ್ತು. ಟಾಸ್‌ ಕೂಡ ನಡೆದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.