Advertisement

Cricket; ಚಾಂಪಿಯನ್ಸ್‌ ಟ್ರೋಫಿ ನಿರ್ಧಾರ ನರೇಂದ್ರ ಮೋದಿ ಮೇಲಿದೆ: ಪಾಕ್‌ ಮಾಜಿ ಆಟಗಾರ

10:29 AM Sep 01, 2024 | Team Udayavani |

ಹೊಸದಿಲ್ಲಿ: 2025ರಲ್ಲಿ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿ (Champions Trophy) ವಿಚಾರವೂ ಇದೀಗ ಸದಾ ಹೆಡ್‌ ಲೈನ್‌ ನಲ್ಲಿದೆ. ದಿನಕ್ಕೊಂದು ರೀತಿಯ ಸುದ್ದಿಗಳು ಈ ಕೂಟದ ಕುರಿತಾಗಿ ಹೊರಬರುತ್ತಿದೆ. 2025ರ ಚಾಂಪಿಯನ್ಸ್‌ ಟ್ರೋಫಿಯು ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸದ ಕಾರಣದಿಂದ ಕೂಟ ಬೇರೆ ಕಡೆಗೆ ಸ್ಥಳಾಂತರವಾಗುವ ಸಾಧ್ಯತೆಯೂ ಇದೆ.

Advertisement

ಇತ್ತೀಚೆಗೆ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಹೊಸ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅವರ ನೇಮಕಾತಿಯು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ.

ಪಾಕಿಸ್ತಾನದ ಮಾಜಿ ಬ್ಯಾಟರ್ ಬಾಸಿತ್ ಅಲಿ (Basit Ali) ಕೂಡ ಈ ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಡೀ ಸನ್ನಿವೇಶವು ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

“ಈಗ, ಸಂಪೂರ್ಣ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿಯವರ ಹೆಗಲ ಮೇಲಿದೆ. ಅವರು ಒಪ್ಪಿದರೆ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಬಹುದು. ಇಲ್ಲದಿದ್ದರೆ, ಚೆಂಡು ಐಸಿಸಿಯ ಅಂಗಳದಲ್ಲಿರುತ್ತದೆ. ನಂತರ ಜಯ್ ಶಾ ಅವರಿಗೆ ನಿರ್ಧಾರ ಕೈಗೊಳ್ಳಲು ಕಠಿಣವಾಗಬಹುದು” ಎಂದು ಬಾಸಿತ್ ಅಲಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ಅಕ್ಟೋಬರ್‌ನಲ್ಲಿ ಎರಡು ದಿನಗಳ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸರ್ಕಾರದ ಮುಖ್ಯಸ್ಥರ ಸಭೆಗಾಗಿ ಪಿಎಂ ಮೋದಿಯನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲಾಗಿದೆ.

Advertisement

ಇದಕ್ಕೂ ಮೊದಲು ಸ್ಪೋರ್ಟ್ಸ್ ತಕ್‌ ಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಅವರು, ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತವು ಪಾಕಿಸ್ತಾನಕ್ಕೆ ಹೋಗಬಾರದು. ಕೂಟ ನಡೆಸಲು ದುಬೈ ಉತ್ತಮ ಸ್ಥಳವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next