Advertisement

PAKvsBAN; ಬಾಂಗ್ಲಾ ವಿರುದ್ದ ಪಾಕ್‌ ಟೆಸ್ಟ್‌ ಸೋಲಿಗೆ ‘ಭಾರತ’ ಕಾರಣ ಎಂದ ರಮಿಜ್ ರಜಾ

03:46 PM Aug 26, 2024 | Team Udayavani |

ರಾವಲ್ಪಿಂಡಿ: ಪ್ರವಾಸಿ ಬಾಂಗ್ಲಾದೇಶ (Bangladesh) ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋಲು ಕಂಡ ಪಾಕಿಸ್ತಾನ (Pakistan) ತವರಲ್ಲಿಯೇ ಅವಮಾನಕ್ಕೆ ಸಿಲುಕಿದೆ. ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಹತ್ತು ವಿಕೆಟ್‌ ಅಂತರದ ಗೆಲುವು ಸಾಧಿಸಿದೆ.

Advertisement

ಪಾಕಿಸ್ತಾನದ ಮಾಜಿ ಆಟಗಾರ, ಕಾಮೆಂಟೇಟರ್ ರಮಿಜ್ ರಜಾ (Ramiz Raja), ಬಾಂಗ್ಲಾ ವಿರುದ್ಧದ ತಂಡದ ಸೋಲಿಗೆ ಭಾರತದ ಕಾರಣ ಎಂದು ವಿಶ್ಲೇಷಣೆ ಮಾಡಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ.

ಪಾಕಿಸ್ತಾನದ ಸೋಲಿನ ಬಳಿಕ ಮಾತನಾಡಿರುವ ರಮಿಜ್‌ ರಜಾ, “ಮೊದಲನೆಯದಾಗಿ, ತಂಡದ ಆಯ್ಕೆಯಲ್ಲಿಯೇ ತಪ್ಪಾಗಿದೆ. ನೀವು (ಪಾಕಿಸ್ತಾನ) ಸ್ಪಿನ್ನರ್ ಇಲ್ಲದೆ ಆಡಿದ್ದೀರಿ. ಎರಡನೆಯದಾಗಿ, ನಾವು ನಮ್ಮ ವೇಗದ ಬೌಲರ್‌ ಗಳನ್ನು ಅವಲಂಬಿಸಿರುವ ಖ್ಯಾತಿಯು ಮುಗಿದಿದೆ. ಈ ಸೋಲು, ಒಂದು ರೀತಿಯ ಆತ್ಮವಿಶ್ವಾಸದ ಬಿಕ್ಕಟ್ಟು, ಏಷ್ಯಾ ಕಪ್‌ ನಲ್ಲಿ ಭಾರತವು ನಮ್ಮ ವೇಗಿಗಳಿಗೆ ಸೀಮಿಂಗ್ ಪಿಚ್‌ ನಲ್ಲಿ ಹೊಡೆದರು. ಅಲ್ಲಿಂದ ಇದು ಪ್ರಾರಂಭವಾಯಿತು. ನಂತರ ಈ ಲೈನ್-ಅಪ್ ಅನ್ನು ಎದುರಿಸುವ ವಿಧಾನವು ಜಗತ್ತಿನ ಎದುರು ಜಾಹೀರಾಯಿತು. ಈಗ ಅವರ ವೇಗವೂ ಕಡಿಮೆಯಾಗಿದೆ, ಅದರ ಜತೆಗೆ ಕೌಶಲ್ಯವೂ ಕೂಡಾ” ಎಂದರು.

ವೇಗದ ಬೌಲರ್‌ ಗಳನ್ನು ಟೀಕೆ ಮಾಡುವ ಜೊತೆಗೆ ಪಾಕಿಸ್ತಾನದ ನಾಯಕ ಶಾನ್‌ ಮಸೂದ್‌ ವಿರುದ್ದವೂ ರಮಿಜ್‌ ರಜಾ ಅವರು ಟೀಕೆ ಮಾಡಿದರು.

Advertisement

“ಶಾನ್‌ ಮಸೂದ್‌ ಅವರು ಸದ್ಯ ಸೋಲಿನ ಸರಣಿಯಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪರಿಸ್ಥತಿ ಕಷ್ಟಕರವಾಗಿತ್ತು. ಅಲ್ಲಿ ಟೆಸ್ಟ್‌ ಸರಣಿ ಗೆಲ್ಲುವುದು ಕಷ್ಟವಾಗಿತ್ತು. ಆದರೆ ಈಗ ನೀವು ತವರಿನಲ್ಲೇ ಸೋಲು ಕಾಣುತ್ತಿದ್ದೀರಿ, ಅದೂ ಬಾಂಗ್ಲಾದೇಶದಂತೆ ಸೋತಿದ್ದೀರಿ. ಯಾಕೆಂದರೆ ನೀವು ಪರಿಸ್ಥಿತಿಯನ್ನು ಸರಿಯಾಗಿ ಓದುತ್ತಿಲ್ಲ ಎಂದರ್ಥ” ಎಂದು ರಜಾ ಹೇಳಿದರು.

“ಬ್ಯಾಟರ್‌ಗಳು ತಮ್ಮನ್ನು ತಾವು ಅನ್ವಯಿಸಲಿಲ್ಲ. ಬೌಲರ್‌ ಗಳ ಪ್ರದರ್ಶನ ಭಯಾನಕವಾಗಿತ್ತು. ಮಸೂದ್ ಅವರ ಬ್ಯಾಟಿಂಗ್ ಅನ್ನು ಸುಧಾರಿಸಬೇಕಾಗಿದೆ. ಅಲ್ಲದೆ ನಿಮಗೆ ಆಟದ ಬಗ್ಗೆ ಸ್ವಲ್ಪ ಜ್ಞಾನವಿದೆ ಎಂದು ತೋರಿಸಬೇಕಾಗಿದೆ. ಅವರು ಅನುಭವಿ ನಾಯಕ, ಪಿಎಸ್‌ಎಲ್ ಮತ್ತು ಕೌಂಟಿ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾವಲ್ಪಿಂಡಿ ಟ್ರ್ಯಾಕ್‌ಗೆ ಅವರು ಯಾವ ಆಧಾರದ ಮೇಲೆ ನಾಲ್ವರು ವೇಗಿಗಳನ್ನು ಆಯ್ಕೆ ಮಾಡಿದರು ಎಂದು ಅರ್ಥವಾಗಲಿಲ್ಲ ಅವರು ಟೀಕೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next