Advertisement

Ullal; ತಲಪಾಡಿ ಟೋಲ್‌ ಸಿಬಂದಿಗೆ ಹಲ್ಲೆ: ಕಾರಿನಲ್ಲಿದ್ದ ಮೂವರ ತಂಡದ ಕೃತ್ಯ

12:02 AM Dec 03, 2024 | Team Udayavani |

ಉಳ್ಳಾಲ: ಟೋಲ್‌ ಸಿಬಂದಿಗೆ ಕಾರಿನಲ್ಲಿದ್ದ ಮೂವರ ತಂಡ ಹಲ್ಲೆ ನಡೆಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಲ್ಲಿ ರವಿವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಕೃತ್ಯ ಸಂಬಂಧ ಹಲ್ಲೆ ನಡೆಸಿದ ಉಳ್ಳಾಲದ ಓರ್ವನನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

Advertisement

ಉತ್ತರಪ್ರದೇಶ ನೋಂದಾಯಿತ ಐ-20 ಕಾರೊಂದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಐವರು ಯುವಕರ ತಂಡ ತೆರಳುತಿತ್ತು. ತಲಪಾಡಿ ಟೋಲ್‌ ಗೇಟಿನಲ್ಲಿ ಟೋಲ್‌ ಪಾವತಿಸದೆ ಕಾರು ಮುಂದೆ ಚಲಿಸಿದ್ದು, ಈ ವೇಳೆ ಟೋಲ್‌ ನಿರ್ವಹಣೆ ನಡೆಸುವ ಇಜಿಎಸ್‌ ಸಂಸ್ಥೆ ಉದ್ಯೋಗಿ ಕಾರಿನ ಹಿಂಭಾಗಕಕ್ಕೆ ಕೈಯಿಂದ ಬಡಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಕಾರಿನಲ್ಲಿದ್ದ ತಂಡ ಮುಂದೆ ನಿಲ್ಲಿಸಿ ಸಿಬಂದಿಯತ್ತ ದೌಡಾಯಿಸಿ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಟೋಲ್‌ ಸಿಬಂದಿ ಮನು, ಸುಧಾಮ, ಅಮನ್‌ ಅವರು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆ ನಡೆಸಿದವರು ಮೂವರು ಮೂಲತಃ ಉಳ್ಳಾಲ ನಿವಾಸಿಗಳಾಗಿದ್ದು, ಅವರನ್ನು ಝುಲ್ಪಾನ್‌, ನಿಫಾನ್‌, ಫ‌ಯಾಝ್ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ವೀಡಿಯೋ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next